HomeFresh Newsಟ್ರಾಕ್ಟರ್‍ಗೆ ಕಂಟೈನರ್ ಲಾರಿ ಢಿಕ್ಕಿ ; ಟ್ರಾಕ್ಟರ್ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರು

ಟ್ರಾಕ್ಟರ್‍ಗೆ ಕಂಟೈನರ್ ಲಾರಿ ಢಿಕ್ಕಿ ; ಟ್ರಾಕ್ಟರ್ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರು

ಉಪ್ಪಿನಂಗಡಿ: ಓವರ್‍ಟೇಕ್ ಮಾಡುವ ಭರದಲ್ಲಿ ಕಂಟೈನರ್ ಲಾರಿಯೊಂದು ಟ್ರಾಕ್ಟರ್‍ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಟ್ರಾಕ್ಟರ್‍ನ ಹಿಂಬದಿಯ ಟ್ರಾಲಿ ಮಗುಚಿ ಬಿದ್ದ ಘಟನೆ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ಮಂಗಳವಾರ ಸಂಜೆ ಸಂಭವಿಸಿದ್ದು, ಘಟನೆಯಿಂದ ಅದೃಷ್ಟವಶಾತ್ ಟ್ರಾಕ್ಟರ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ನೆಲ್ಯಾಡಿ ಕಡೆಯಿಂದ ಬಿ.ಸಿ.ರೋಡು ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿಯು ಅದೇ ಮಾರ್ಗವಾಗಿ ಹೋಗುತ್ತಿದ್ದ ಟ್ರಾಕ್ಟರ್ ಅನ್ನು ಗಾಂಧಿಪಾರ್ಕ್ ಬಳಿ ಓವರ್‍ಟೇಕ್ ಮಾಡಿದ್ದು, ಆಗ ಟ್ರಾಕ್ಟರ್‍ಗೆ ಕಂಟೈನರ್ ಲಾರಿಯು ಡಿಕ್ಕಿ ಹೊಡೆದಿದೆ. ಘಟನೆಯಿಂದ ಟ್ರಾಕ್ಟರ್‍ನ ಎಂಜಿನ್‍ನ ಭಾಗ ರಸ್ತೆಯಲ್ಲಿ ನೇರವಾಗಿ ನಿಂತಿದ್ದರೆ, ಅದರ ಹಿಂದಿನ ಟ್ರಾಲಿ ಪಲ್ಟಿಯಾಗಿತ್ತು. ಅಪಘಾತದಿಂದಾಗಿ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಈ ಬಗ್ಗೆ ಪುತ್ತೂರು ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments