ಡಿ.17ರಂದು ಬೆಳ್ತಂಗಡಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ

ಇದೇ ತಿಂಗಳ 17 ರಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆಳ್ತಂಗಡಿ ಗೆ ಆಗಮಿಸಲಿದ್ದಾರೆ ಎಂದು ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರು ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಮಾದ್ಯಮದ ಜೊತೆ ಮಾತನಾಡಿ ಈ ತಿಂಗಳ 17ರಂದು ವಸಂತ ವಿನ್ಯಾಸ ಪುಸ್ತಕ ಬಿಡುಗಡೆ ಗೊಳಿಸಿ ನಂತರ ಕಾಂಗ್ರೆಸ್ ವತಿಯಿಂದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು.ಬೆಳ್ತಂಗಡಿ ಕಾಂಗ್ರೆಸ್ ಕಾರ್ಯಕರ್ತರ ಹುರಿದುಂಬಿಸಲು ಪಕ್ಷ ಬಲವರ್ಧನೆ ಮತ್ತು ಪಕ್ಷ ಸಂಘಟನೆ ಗೆ ಈ ಕಾರ್ಯಕ್ರಮ ಮಾಡುತ್ತಿದ್ದು ಕಾರ್ಯಕ್ರಮಕ್ಕೆ ಸುಮಾರು ಇಪ್ಪತೈದು ಸಾವಿರ ಜನ ಸೇರುವ ನಿರೀಕ್ಷೆ ಇದೆ.ಇದು ಬೆಳ್ತಂಗಡಿಯ ಇತಿಹಾಸದಲ್ಲೇ ಮೊದಲ ದಾಖಲೆ ಕಾರ್ಯಕ್ರಮ ಆಗಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಗಂಗಾಧರ ಗೌಡ,ಮುಖಂಡರಾದ ರಂಜನ್ ಗೌಡ,ಅಭಿನಂದನ್,ಶೈಲೇಶ್,ಹಾಗೂ ಇತರರು ಉಪಸ್ಥಿತರಿದ್ದರು.
