ಉಪ್ಪಿನಂಗಡಿಯ ಪೊಲೀಸ್ ಠಾಣೆಯ ಎದುರಿನಲ್ಲೇ ಕಳ್ಳರ ಕೈಚಳಕ

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಉಪ್ಪಿನಂಗಡಿಯ ಲಕ್ಷ್ಮೀ ಸ್ಟೋರ್ ನ ಷಟರ್ ಮುರಿದು ಒಳನುಗ್ಗಿರುವ ಕಳ್ಳರು ಸುಮಾರು 40 ಸಾವಿರ ರೂಪಾಯಿ ನಗದು ಹಾಗೂ ಸೊತ್ತುಗಳನ್ನು ದೋಚಿದ್ದಾರೆ. ಬಸ್ ನಿಲ್ದಾಣ ಬಳಿಯ ಸೆಲ್ ಸೈಟ್ ಮೊಬೈಲ್ ಶಾಪ್ ಗೆ ನುಗ್ಗಿದ ಕಳ್ಳರು 5 ಸಾವಿರ ರೂಪಾಯಿ ನಗದು ದೋಚಿದ್ದಾರೆ.

puttur robbery

ಬ್ಯಾಂಕ್ ರಸ್ತೆಯಲ್ಲಿರುವ ಕಾಮತ್ ಕೋಲ್ಡ್ ಹೌಸ್ ಗೆ ನುಗ್ಗಿದ್ದು ಅಲ್ಲಿ ಡ್ರಾಯರ್ ಜಾಲಾಡಿ ಬರಿ ಕೈಯಲ್ಲಿ ಮರಳಿದ್ದಾರೆ.ಕಳೆದ ರಾತ್ರಿ ಕಳ್ಳರು ಈ ಕೃತ್ಯ ನಡೆಸಿದ್ದು, ಪೊಲೀಸ್ ಠಾಣೆಯ ಎದುರಿನಲ್ಲೆ ಕಳ್ಳರು ತಮ್ಮ ಕೈಚಳಕ ತೋರಿದ್ದು, ನಾಗರಿಕ ವಲಯದಲ್ಲಿ ದಿಗ್ಬೃಮೆ ಮೂಡಿಸಿದೆ.ಉಪ್ಪಿನಂಗಡಿಯ ಪೋಲಿಸ್ ಠಾಣೆ ಪೋಲಿಸರು ಸಿಸಿ ಕ್ಯಾಮರಾ ಪರಿಶೀಲಿಸಿದ್ದು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

fathermuller

Related Posts

Leave a Reply

Your email address will not be published.