HomeFresh Newsವಿ.ಕೆ. ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್‌ನ ನೂತನ ಶೋರೂಮ್ ಉಡುಪಿಯಲ್ಲಿ ಜುಲೈ 4ರಂದು ಶುಭಾರಂಭ

ವಿ.ಕೆ. ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್‌ನ ನೂತನ ಶೋರೂಮ್ ಉಡುಪಿಯಲ್ಲಿ ಜುಲೈ 4ರಂದು ಶುಭಾರಂಭ

ಕರಾವಳಿ ಭಾಗದಲ್ಲಿ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ವಿಶ್ವಾಸದ ಪ್ರತೀಕವಾಗಿ ಗುರುತಿಸಿಕೊಂಡಿರುವ ವಿ.ಕೆ.ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್‌ನ ಹೊಸ ಭವ್ಯ ಶೋರೂಮ್ ಇದೀಗ ದೇವಸ್ಥಾನಗಳ ನಗರಿ ಉಡುಪಿಯ ಕುಂಜಿಬೆಟ್ಟು ಕಡಿಯಾಳಿ ಇಲ್ಲಿ ಜುಲೈ 4 ಶನಿವಾರದಂದು ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ.

ವಿ.ಕೆ. ಸಮೂಹ ಸಂಸ್ಥೆಯ ಅಂಗ ಸಂಸ್ಥೆಯಾದ ವಿ.ಕೆ.ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಸುಮಾರು ಹದಿನೈದು ವರ್ಷಗಳಿಂದ ಕರಾವಳಿ ಭಾಗದ ಜನರಿಗೆ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಕರಗಳನ್ನು ಒದಗಿಸುತ್ತಾ ಬಂದಿದ್ದು, ವಿವಿಧ ಮಾದರಿಯ ಶೈಲಿಯ ಅತ್ಯಾಧುನಿಕ ಮರದ ಮತ್ತು ಮೆಟಲ್ ಫರ್ನಿಚರ್ ತಯಾರಿಸುವಲ್ಲಿ ಮುಂಚೂಣಿಯ ಸಂಸ್ಥೆಯಾಗಿದೆ. ಮಂಗಳೂರಿನಲ್ಲಿ ಪ್ರಸ್ತುತ ಐದು ಶಾಖೆಗಳನ್ನು ಹೊಂದಿದ್ದು, ಇದೀಗ ಆರನೇ ಶಾಖೆ ಉಡುಪಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ಉಡುಪಿ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಉಡುಪಿ ವಿಧಾನಸಭಾ ಶಾಸಕರಾದ ಯಶ್‌ಪಾಲ್ ಸುವರ್ಣ, ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಕರ್ನಾಟಕ ರಾಜ್ಯ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಮ್.ಎ.ಗಫೂರ್, ಕಾಂಚನಾ ಆಟೋಮೊಬೈಲ್ಸ್ ಪೈವೇಟ್ ಲಿಮಿಟೆಡ್ ಇದರ ವ್ಯವಸ್ಥಾಪಕ ನಿರ್ದೆಶಕರು ಹಾಗೂ ಐಎನ್‌ಸಿ, ಉಡುಪಿಯ ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ಸಾಯಿ ರಾಧಾ ಗ್ರೂಪ್, ಉಡುಪಿ ಇದರ ಅಧ್ಯಕ್ಷರಾದ ಮನೋಹರ್ ಶೆಟ್ಟಿ ಮತ್ತು ಮಾಂಡೋವಿ ರಿಯಲ್ ಎಸ್ಟೇಟ್ ಡೆವಲಪರ್, ಉಡುಪಿ ಇದರ ವ್ಯವಸ್ಥಾಪಕ ಪಾಲುದಾರರಾದ ಕ್ಲಿನ್ ಡಾಯಸ್ ಮುಂತಾದವರು ಗೌರವ ಅತಿಥಿಗಳಾಗಿ ಆಗಮಿಸಲಿರುವರು.

ಉಡುಪಿಯ ವಿಕೆ ಫರ್ನಿಚರ್ಸ್ & ಎಲೆಕ್ಟ್ರಾನಿಕ್ಸ್‌ನಲ್ಲಿ ’ವಿಸಿಟ್ & ವಿನ್’ ಕಾಶ್ಮೀರ ಪ್ರವಾಸ ಗೆಲ್ಲುವ ಸುವರ್ಣಾವಕಾಶ ಉಡುಪಿ ಜಿಲ್ಲೆಯ ಕುಂಜಿಬೆಟ್ಟುವಿನಲ್ಲಿರುವ ವಿಕೆ ಫರ್ನಿಚರ್ & ಎಲೆಕ್ಟ್ರಾನಿಕ್ಸ್ ತನ್ನ ಗ್ರಾಹಕರಿಗಾಗಿ ಉದ್ಘಾಟನಾ ಪ್ರಯುಕ್ತವಾಗಿ “ವಿಸಿಟ್ & ವಿನ್” ಅಭಿಯಾನವನ್ನು ಘೋಷಿಸಿದ್ದು, ಈ ಅಭಿಯಾನದಡಿ ಸಂಸ್ಥೆಗೆ ಭೇಟಿ ನೀಡಿ ನೀಡುವ ಗ್ರಾಹಕರಿಗೆ ಕನಸಿನ ತಾಣ ಕಾಶ್ಮೀರ ಪ್ರವಾಸ ಗೆಲ್ಲುವ ಅಪರೂಪದ ಅವಕಾಶ ಕಲ್ಪಿಸಲಾಗಿದೆ.

ಮನೆ ಹಾಗೂ ಕಚೇರಿಗೆ ಬೇಕಾದ ಗುಣಮಟ್ಟದ ಫರ್ನಿಚರ್, ಹೋಮ್ ಮತ್ತು ಆಫೀಸ್ ಇಂಟೀರಿಯರ್, ಡೆಕೋರೇಟಿವ್ ಹಾಗೂ ಫರ್ನಿಶಿಂಗ್ ಉತ್ಪನ್ನಗಳು, ಟೆಲಿವಿಷನ್‌ಗಳು, ಗೃಹೋಪಯೋಗಿ ವಿದ್ಯುತ್ ಉಪಕರಣಗಳು, ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು ಹಾಗೂ ಕಿಚನ್‌ವೇರ್ ಸೇರಿದಂತೆ ಎಲ್ಲ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿರಲಿದ್ದು, ಸಂಸ್ಥೆಯ ಪ್ರವರ್ತಕರಾದ ವಿಠಲ್ ಕುಲಾಲ್ ಮತ್ತು ವಿನುತಾ ವಿಠಲ್ ಕುಲಾಲ್ ಸಾರ್ವಜನಿಕರನ್ನು ಶೋರೂಮ್‌ಗೆ ಭೇಟಿಗೆ ಆಹ್ವಾನಿಸಿದ್ದಾರೆ.

ರೆಡಿಮೇಡ್ ಮತ್ತು ಕಸ್ಟಮೈಸ್ಟ್ ಲಕ್ಷುರಿ ಸೋಫಾಗಳು, ಆಕರ್ಷಕ ಡೈನಿಂಗ್ ಸೆಟ್‌ಗಳು, ಆಧುನಿಕ ಬೆಡ್‌ರೂಮ್ ಸೆಟ್‌ಗಳು, ವಾರ್ಡ್‌ರೋಬ್‌ಗಳು ಮತ್ತು ಮನೆಯ ಪ್ರತಿಯೊಂದು ಮೂಲೆಯನ್ನು ಸುಂದರಗೊಳಿಸುವ ಪೀಠೋಪಕರಣಗಳ ಅದ್ಭುತ ಸಂಗ್ರಹ ಇಲ್ಲಿದೆ. ಇಷ್ಟೇ ಅಲ್ಲದೆ, ಅತ್ಯಾಧುನಿಕ ಸ್ಮಾರ್ಟ್ ಟಿವಿಗಳು, ರೆಫ್ರಿಜರೇಟರ್‌ಗಳು, ವಾಶಿಂಗ್ ಮೆಷಿನ್‌ಗಳು, ಏರ್ ಕಂಡೀಷನರ್‌ಗಳು, ವಾಟರ್ ಹೀಟರ್‌ಗಳು, ವಾಟರ್ ಪ್ಯೂರಿಫೈಯರ್‌ಗಳು, ಚಿಮ್ಮಿ ಮತ್ತು ಹಾಬ್, ಮೈಕ್ರೋವೇವ್ ಓವನ್‌ಗಳು, ಮಿಕ್ಸರ್‌ಗಳು ಹಾಗೂ ಇನ್ನೂ ಅನೇಕ ವಿಶ್ವಾಸಾರ್ಹ ಬ್ರಾಂಡ್‌ಗಳ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಗ್ರಾಹಕರ ಆಯ್ಕೆಗೆ ಸಿದ್ಧವಾಗಿವೆ.
ವಿ.ಕೆ. ಫರ್ನಿಚರ್ ಮತ್ತು
ಎಲೆಕ್ಟ್ರಾನಿಕ್ಸ್‌ನಲ್ಲಿ ಎಲ್ಲ ರೀತಿಯ ಪೀಠೋಪಕರಣಗಳು, ಒಳಾಂಗಣದ ಸಾಂಪ್ರದಾಯಿಕ ಪೀಠೋಪಕರಣಗಳು, ಮಂಚಗಳು, ಡೈನಿಂಗ್ ಸೆಟ್‌ಗಳು, ಲಿವಿಂಗ್ ರೂಮಿನ ಸೋಫಾ ಸೆಟ್‌ಗಳು, ಸ್ಟಡಿ ಟೇಬಲ್‌ಗಳು, ಮೊಡ್ಯುಲರ್ ಕಿಚನ್‌ಗಳು, ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪಕರಣಗಳು ಮತ್ತು ಡ್ಯೂರೊಪ್ಲೆಕ್ಸ್ ಮ್ಯಾಟೆಸ್‌ಗಳು ಸೇರಿದಂತೆ ಮನೆ ಮತ್ತು ಕಚೇರಿಯ ಪ್ರತಿಯೊಂದು ಮೂಲೆಯನ್ನೂ ಸೊಬಗುಗೊಳಿಸುವ ವೈವಿಧ್ಯಮಯ ಮತ್ತು ದೀರ್ಘಬಾಳಿಕೆ ಬರುವ ಗ್ರಾಹಕ ವಸ್ತುಗಳು ಮತ್ತು ಉತ್ಪನ್ನಗಳು ಯೋಗ್ಯವಾದ ಬೆಲೆಗೆ ಲಭ್ಯವಿವೆ. ವಿ.ಕೆ. ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಮೆಟಲ್ ಫರ್ನಿಚರ್ ತಯಾರಿಕೆಗೂ ಹೆಸರುವಾಸಿಯಾಗಿದ್ದು ಮನೆಗಳಿಗೆ ಬೇಕಾದ ಗ್ರಹಪಯೋಗಿ ವಸ್ತುಗಳಲ್ಲದೆ ಸಂಸ್ಥೆಗಳಿಗೆ ಬೇಕಾದ ದೊಡ್ಡ ಪ್ರಮಾಣದ ಸಗಟು ಆರ್ಡ?ರಗಳನ್ನು ಅತಿ ಕಡಿಮೆ ಅವಧಿಯಲ್ಲಿ ಸರಬರಾಜು ಮಾಡುವ ತಯಾರಿಕಾ ಘಟಕವನ್ನು ಹೊಂದಿದೆ.
ವಿ.ಕೆ. ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಸಂಸ್ಥೆ ಯೆಯ್ಯಾಡಿ, ತೊಕ್ಕೊಟ್ಟು, ವಾಮಂಜೂರು ಮತ್ತು ಲೇಡಿಹಿಲ್‌ನಲ್ಲಿ ತನ್ನ ಶೋರೂಮ್‌ಗಳನ್ನು ಹೊಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments