ವಾರಂಬಳ್ಳಿ ಗ್ರಾಮ ಪಂಚಾಯತಿ – ಗ್ರಾಮೀಣ ಮಕ್ಕಳಿಗಾಗಿ ಬೇಸಿಗೆ ಶಿಬಿರ

ವಾರಂಬಳ್ಳಿ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೂಲಕ 7 ದಿನಗಳ ಕಾಲ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಜರುಗಿತು.ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣದ 8 ವರ್ಷದಿಂದ 13 ವರ್ಷದ 50 ಮಕ್ಕಳಿಗೆ ಪ್ರತೀ ದಿನ ಬೆಳಿಗ್ಗೆ 10 ಗಂಟೆಯಿಂದ 1-30 ರ ತನಕ ನಾನಾ ಸಂಪನ್ಮೂಲ ವ್ಯಕ್ತಿಗಳಿಂದ ವಿಜ್ಞಾನ , ಗಣಿತ , ನಾಯಕತ್ವ ,ಮನರಂಜನೆ ,ಕ್ರೀಡೆ , ಪರಿಸರ ಸಾಮಾಜಿಕ ಕಾಳಜಿಯ ಕುರಿತು ತರಬೇತಿ ನೀಡಲಾಗಿತ್ತು.

ತರಬೇತಿ ಪಡೆದ ಮಕ್ಕಳು ದಿನದಿಂದ ದಿನಕ್ಕೆ ಸಭಾ ಕಂಪನ ಮರೆತು, ನಾಯಕತ್ವ ಗುಣ ಸೇರಿದಂತೆ ಸಮೂಹ ಸಂವವನ ಹೆಚ್ಚಿಸಿಕೊಂಡು ರಜೆಯಲ್ಲಿ ಮನೆಯಲ್ಲಿ ಕುಳಿತು ಒಂಟಿತನದ ಶಿಕ್ಷೆ ಮರೆತು ಸಾರ್ವಜನಿಕ ಸಂಪರ್ಕದ ಅನುಭವ ಪಡೆದರು. ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿ ಹರೀಶ್ , ಕಾರ್ಯದರ್ಶಿ ಶೇಖರ ನಾಯ್ಕ್ , ಗ್ರಾಮಪಂಚಾಯತಿ ಉಪಾಧ್ಯಕ್ಷ ದೇವಾನಂದ ನಾಯಕ್ , ಗ್ರಂಥ ಪಾಲಕಿ ಬೇಬಿ ಮತ್ತು ಗ್ರಾಮಪಂಚಾಯತಿ ಸದಸ್ಯರು ಸಹಕಾರ ನೀಡಿದ್ದರು.
