‘ದೂರ ಸಂಪರ್ಕ ಸಾಧನಗಳ ಬಳಕೆ ಮಿತವಾಗಿರಲಿ’

ಉಜಿರೆ: ದೂರ ಸಂಪರ್ಕ ಸಾಧನಗಳ ಬಳಕೆ ಮಿತವಾಗಿರಲಿ ಎಂದು ಎಸ್.ಡಿ.ಎಂ ಕಾಲೇಜಿನ ಗಣಕಯಂತ್ರ ವಿಜ್ಞಾನ ವಿಭಾಗದ ಪ್ರೊ. ಶೈಲಜಾ ಅಭಿಪ್ರಾಯಪಟ್ಟರು.
ಎಸ್.ಡಿ.ಎಂ. ಪದವಿ ಕಾಲೇಜಿನ ಭೌತಶಾಸ್ತ್ರ ವಿಭಾಗವು ಗುರುವಾರ ‘ವಿಶ್ವ ದೂರ ಸಂಪರ್ಕ ದಿನ ಆಯೋಜಿಸಿದ್ದ ಗುರುತ್ವ-2023 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ದೂರ ಸಂಪರ್ಕ ಸೌಲಭ್ಯದಿಂದಾಗಿ ವಿಶ್ವದ ಗಾತ್ರ ಸಣ್ಣದಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಕ್ಷಣ ವಿಶ್ವದಾದ್ಯಂತ ಪಸರಿಸುವ ಶಕ್ತಿ ಈ ದೂರ ಸಂಪರ್ಕ ಸೌಲಭ್ಯ ದಲ್ಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗುರುತ್ವ-2023 ಹಬ್ಬದ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಎಸ್ ಕಾಕತ್ಕರ್ ಉಪಸ್ಥಿತರಿದ್ದರು. ಅಸ್ಮಿತಾ ನಿರೂಪಿಸಿ ವಂದಿಸಿದರು.

Related Posts

Leave a Reply

Your email address will not be published.