100 ನೇ ವರ್ಷದ ಮಂಗಳೂರು ಶಾರದಾ ಮಹೋತ್ಸವ ವಿಶೇಷ ಅಂಚೆ ಚೀಟಿ ಬಿಡುಗಡೆ
ಮಂಗಳೂರು: ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ ಆಚಾರ್ಯ ಮಠದ ವಠಾರದಲ್ಲಿ ಪೂಜಿಸಲ್ಪಡುವ ಮಂಗಳೂರು ಶಾರದಾ ಮಹೋತ್ಸವದ ಶತಮಾನೋತ್ಸವ ಸವಿನೆನಪಿಗಾಗಿ
ಸೋಮವಾರ ಕ್ಷೇತ್ರದ ಸರಸ್ವತಿ ಕಲಾ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಚೀಟಿ
ಬಿಡುಗಡೆ ಮಾಡಲಾಯಿತು.
ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕ ಹರ್ಷ, ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಎನ್. ಡಾ.ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ
ಬಾಲಕೃಷ್ಣ ಶೆಣೈ, ಕೋಶಾಧಿಕಾರಿ ಪಂಡಿತ ವಿಠಲ ಆಚಾರ್ಯ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಪಂಡಿತ್ ನರಸಿಂಹ ಆಚಾರ್ಯ,
ಕೆಎಸ್‌ಎಸ್‌ಐಎ ಪ್ರೆಸಿಡೆಂಟ್ ಕೌನ್ಸಿಲ್ ಮೆಂಬರ್ ಬೆಂಗಳೂರು ಅರುಣ್ ಪಡಿಯಾರ್ ಉಪಸ್ಥಿತರಿದ್ದರು.