ಪುತ್ತೂರು : ಪ್ರಥಮ ಬಾರಿಗೆ ಪುತ್ತೂರ್ದ ಪಿಲಿ ರಂಗ್ ಹುಲಿವೇಷ ಸ್ಪರ್ಧೆ
ಪುತ್ತೂರು: ಪುತ್ತೂರಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕರಾವಳಿಯ ಆಯ್ದ ತಂಡಗಳ ಹುಲಿವೇಷ ಸ್ಪರ್ಧೆ “ಪುತ್ತೂರ್ದ ಪಿಲಿ ರಂಗ್’ ಅಕ್ಟೋಬರ್ 1ರಂದು ಶನಿವಾರ ನಗರದ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವರಾತ್ರಿ ಸಂದರ್ಭದಲ್ಲಿ ಯುವ ಜನತೆಯನ್ನು ಸಾಂಪ್ರದಾಯಿಕ ಹುಲಿವೇಷ ಕುಣಿತಕ್ಕೆ ಪೆÇ್ರೀತ್ಸಾಹಿಸಲು ಮತ್ತು ಅಪ್ಪಟ ನಮ್ಮ ಮಣ್ಣಿನ ನೆಲದ ಜಾನಪದ ಕುಣಿತವನ್ನು ಉತ್ತೇಜಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಜಾತಿ, ಧರ್ಮ, ಭಾಷೆ, ಪಕ್ಷಗಳ ಎಲ್ಲೆಯನ್ನು ಮೀರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯ 8 ಹುಲಿವೇಷ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಪ್ರತೀ ತಂಡದಲ್ಲಿ ಗರಿಷ್ಠ 15 ಹುಲಿ ವೇಷಗಳು ಇರಬಹುದು. ಪ್ರತೀ ತಂಡ ಗರಿಷ್ಠ 25 ನಿಮಿಷಗಳ ಅವಧಿ ಪ್ರದರ್ಶನ ನೀಡಬಹುದು ಎಂದು ಹೇಳಿದ ಅವರು, ಅ.1ರಂದು ಬೆಳಗ್ಗೆ ಕಾರ್ಯಕ್ರಮದ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪ್ರಾರ್ಥನೆ ಇರಲಿದೆ. ಬಳಿಕ ಕಿಲ್ಲೆ ಮೈದಾನದಲ್ಲಿ ಶ್ರೀ ಗಣಪತಿ ಹೋಮ ನಡೆಯದೆ.
11 ಗಂಟೆಗೆ ದೀಪಪ್ರಜ್ವಲನ ನಡೆದು ಸ್ಪರ್ಧೆ ಆರಂಭಗೊಳ್ಳಿದೆ. ಸಂಜೆ ಸಮಾರೋಪ ಸಮಾರಂಭ, ಪ್ರಶಸ್ತಿ ಪ್ರದಾನ ನಡೆಯಲಿದೆ. ಉಡುಪಿಯ ಮಹಿಳೆಯರ ಹುಲಿವೇಷ ತಂಡ ಬರಲಿದ್ದು, ಅವರು ಕಾರ್ಯಕ್ರಮದ ಮಧ್ಯೆ ವಿಶೇಷ ಹುಲಿವೇಷ ನೃತ್ಯ ಪ್ರದರ್ಶನ ಮಾಡಲಿದ್ದಾರೆ ಎಂದು ನುಡಿದರು.ಸುದ್ದಿಗೋಷ್ಠಿಯಲ್ಲಿ ಪುತ್ತೂರ್ದ ಪಿಲಿರಂಗ್ ಸಮಿತಿಯ ಗೌರವಾಧ್ಯಕ್ಷರಾದ ಎನ್. ಚಂದ್ರಹಾಸ ಶೆಟ್ಟಿ, ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್, ಕಾರ್ಯಾಧ್ಯಕ್ಷರಾದ ಶಿವರಾಮ ಆಳ್ವಾ, ಕೋಶಾಧಿಕಾರಿ ರಂಜಿತ್ ಬಂಗೇರ ಉಪಸ್ಥಿತರಿದ್ದರು.