ಗ್ರಾಮೀಣ ಭಾಗದಲ್ಲಿ ಚರ್ಚ್ ಫಾದರ್ ನೇತೃತ್ವದಲ್ಲಿ ಗ್ರಾಮದ ಮನೆಗಳಿಗೆ ಭೇಟಿ

ಕ್ರಿಸ್ ಮಸ್ ಏಸುಕ್ರಿಸ್ತನ ಜನ್ಮದಿನ. ಪ್ರಪಂಚದಾದ್ಯಂತ ಕ್ರೈಸ್ತರು ಈ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸ್ತಾರೆ. ಅದ್ರಲ್ಲೂ ಕರಾವಳಿಯಲ್ಲಿ ಕ್ರಿಸ್ ಮಸ್ ಹಬ್ಬ ಅಂದ್ರೆ ಮತ್ತಷ್ಟು ವಿಭಿನ್ನ. ಮಂಗಳೂರಿನ ಗ್ರಾಮೀಣ ಭಾಗಗಳಲ್ಲಿ ಕ್ರಿಸ್ ಮಸ್ ಹಬ್ಬದ ತಯಾರಿ ಸಂದೇಶ ಹೇಗಿರುತ್ತೆ ಅಂತಾ ತಿಳ್ಕೋಬೇಕಾ. ಹಾಗಾದ್ರೆ ಈ ಸ್ಟೋರಿ ನೋಡಿ.

ನಕ್ಷತ್ರಗಳಿಂದ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡ ಮನೆಗಳು. ಎಲ್ಲರ ಮುಖದಲ್ಲೂ ಹಬ್ಬದ ಸಂಭ್ರಮದ ಕಳೆ. ಗ್ರಾಮದ ಚರ್ಚ್ ಫಾದರ್ ಜೊತೆಗೆ ಊರಮಂದಿಯ ಮನೆ ಮನೆ ಭೇಟಿ. ಹೌದು ಇದು ಕರಾವಳಿಯಲ್ಲಿ ಕ್ರಿಸ್ ಮಸ್ ಮುನ್ನಾದಿನಗಳಲ್ಲಿ ಕಂಡುಬರೋ ದೃಶ್ಯ. ಏಸು ಕ್ರಿಸ್ತನ ಜನ್ಮದಿನದ ಕ್ರಿಸ್ ಮಸ್ ಹಬ್ಬ ಡಿಸೆಂಬರ್ 25 ಕ್ಕೆ ಆಚರಿಸಲಾಗುತ್ತೆ. ಮಂಗಳೂರಿನಾದ್ಯಂತ ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಹೆಚ್ಚು ಕಡಿಮೆ ಒಂದು ತಿಂಗಳು ಕಾಲ ಆಚರಿಸಲಾಗುತ್ತೆ. ವರ್ಷದಲ್ಲಿ ಕ್ರಿಶ್ಚಿಯನ್ನರು ಆಚರಿಸೊ ಈ ಹಬ್ಬದ ಸಂದೇಶ ಸಾರೋ ನಿಟ್ಟಿನಲ್ಲಿ ಕರಾವಳಿಯ ಗ್ರಾಮೀಣ ಭಾಗಗಲ್ಲಿ ಚರ್ಚ್ ಫಾದರ್ ನೇತ್ರತ್ವದಲ್ಲಿ ಗ್ರಾಮದ ಮನೆ ಮನೆಗಳಿಗೆ ಭೇಟಿ ನೀಡಲಾಗುತ್ತೆ. ಏಸುವಿನ ಸಂದೇಶ ಸಾರುತ್ತಾ ಬೈಬಲ್ ವಾಖ್ಯಗಳನ್ನ ಪಠಿಸುತ್ತಾ ಕ್ರೈಸ್ತರು ಹಬ್ಬವನ್ನು ಆಚರಿಸುತ್ತಾರೆ.

:ಇನ್ನು ಕ್ರಿಸ್ಮಸ್ ಹಬ್ಬದ ಅಂದ್ರೆ ಸಂತಾಸ್ಲಾಸ್ ಇದ್ದೇ ಇರ್ಲೇ ಬೇಕಲ್ವಾ. ಹೌದು ಗ್ರಾಮ ಭೇಟಿಯಲ್ಲಿ ಮನೆಗೆ ಸಂತಾಕ್ಲಾಸ್ ಬಂದ ಅಂದ್ರೆ ಮಕ್ಕಳಿಗೆ ಖುಷಿಯೋ ಖುಷಿ. ಸಂತಾಕ್ಲಾಸ್ ಅಜ್ಜನೊಂದಿಗೆ ಕುಣಿಯುತ್ತಾ ಪಠಾಕಿಗಳನ್ನು ಮಕ್ಕಳೂ ಸಂಭ್ರಮಿಸುತ್ತಾರೆ. ಬಾಲ ಕ್ರೈಸ್ತನನ್ನು ಮನೆ ಮನಗಳಲ್ಲಿ ತುಂಬಿಸಿಕೊಳ್ಳುತ್ತಾರೆ. ಜೊತೆಗೆ ಕ್ರಿಸ್ ಮಸ್ ಹಬ್ಬಕ್ಕೆ ತಯಾರಿಸೋ ತಿಂಡಿಗಳು ಬಾಯಲ್ಲಿ ನೀರುಣಿಸ್ತಾವೆ. ಅಕ್ಕಿಯಿಂದ ತಯಾರಿಸೋ ಕುಸ್ವಾರ್, ಕ್ರಿಸ್ಮಸ್ ಕೇಳಿ, ಗುಳಿಯಪ್ಪ, ವಡೆ ಸೇರಿದಂತೆ ನಾನಾ ತಿಂಡಿತಿನಿಸುಗಳು ಕರಾವಳಿಯ ಕ್ರಿಸ್ಮಸ್ ಸ್ಪೆಷಲ್. ಜೊತೆಗೆ ಏಸುಜನ್ಮದ ಸಂದೇಶ ಸಾರೋ ಗೋಧೋಳಿಯೂ ಪ್ರಮುಖ ಆಕರ್ಷಣೆ.

ವರ್ಷದ ಕೊನೆಯಲ್ಲಿ ಬರುವ ಈ ಹಬ್ಬ ಹತ್ತಿರ ಬರುತ್ತಿದ್ದಂತೆ ಮಂಗಳೂರಿನಾದ್ಯಂತ ಕಲರ್ ಫುಲ್ ಲುಕ್ ಜಲಕ್ ಸೃಷ್ಟಿಯಾಗಿದೆ. ಅಲ್ಲದೆ ಪ್ರತಿ ಮನೆಗಳಿಗೆ ಹೋಗುವ ಫಾದರ್ ಒಂದು ಕಡೆ ಇತಿಹಾಸವನ್ನು ಸಾರಿದ್ರೆ, ಇನ್ನೊಂದು ಕಡೆ ಸಂತಾಕ್ಲಾಸ್ ನ ಎಂಟರ್ಟೈನ್ ಮೆಂಟ್ ಎಲ್ಲರಲ್ಲು ಸಂತತ ಮೂಡಿಸಿದೆ. ಎಲ್ಲರಿಗೂ ಅಡ್ವಾನ್ಸ್ ಆಗಿ ಹ್ಯಾಪಿ ಕ್ರಿಸ್ ಮಸ್.

Related Posts

Leave a Reply

Your email address will not be published.