ವೆಸ್ಟ್ ಕೋಸ್ಟ್ ದ್ವಿಚಕ್ರ ವಾಹನ ಮಾರಾಟ ಮಳಿಗೆ: ಬೈಕ್ ಖರೀದಿಯ ಗ್ರಾಹಕರಿಗೆ ಲಕ್ಕಿ ಡ್ರಾಕಾರ್ಯಕ್ರಮ
ವಿವಿಧ ರೀತಿಯ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ವಾಹನವನ್ನ ಪರಿಚಯಿಸುತ್ತಿರುವ ಮಂಗಳೂರಿನ ದ್ವಿಚಕ್ರ ವಾಹನ ಷೋರೂಮ್ ಆದ ವೆಸ್ಟ್ ಕೋಸ್ಟ್ನಲ್ಲಿ ಇದೀಗ 3ನೆ ವಾರದ ಲಕ್ಕಿ ಡ್ರಾ ವು ನಡೆಯಿತು. ವೆಸ್ಟ್‍ಕೋಸ್ಟ್ ಹೀರೋ ಉತ್ಸವದ ಮೂರನೇ ವಾರದ ಅದೃಷ್ಟಶಾಲಿಯಾಗಿ ಕಿಶೋರ್ ಸಂಧ್ಯಾ ದಂಪತಿಗಳು ಆಯ್ಕೆಯಾಗಿದ್ದಾರೆ. ಅವರಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಸೇನಾಧಿಕಾರಿ ದಯಾನಂದ ನೆಕ್ಕರೆಕೆರೆ ಅವರು ವಿಟ್ಲ ಶೋರೂಂನಲ್ಲಿ ಮೊಬೈಲನ್ನು ವಿತರಿಸಿದರು. ಕಳೆದವಾರ ಸಂಧ್ಯಾ ದಯಾನಂದ ವೆಸ್ಟ್‍ಕೋಸ್ಟ್ ಶೋರೂಂನಲ್ಲಿ ಸ್ಲೆಂಡರ್ ಪ್ಲೆಸ್ ಬೈಕ್ ಖರೀದಿಸಿದ್ದು ಅದರಂತೆ ಅದೃಷ್ಟ ಕೂಪನ್ ಪಡೆದಿದ್ದರು, ಅದೃಷ್ಟ ಕೂಪನ್‍ನಲ್ಲಿ ರಿಯಲ್ ಮಿ 21 ಕ್ಯಾಮರಾ ಮೊಬೈಲನ್ನು ಬಹುಮಾನವಾಗಿ ಪಡೆದುಕೊಂಡರು. ಎಫ್ ಎಸ್ ಪಾಟ್ರ್ಸ್ ಮಾಲಕ ಅಶ್ರಫ್, ವೆಸ್ಟ್‍ಕೋಸ್ಟ್ ಶೋರೂಂನ ಸಿಬ್ಬಂದಿಗಳು ಮತ್ತು ಗ್ರಾಹಕರು ಉಪಸ್ಥಿತರಿದ್ದರು.