ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ಸಪ್ತಾಹ 2022: ಆಂಟಿಬಯೋಟಿಕ್‌ಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ

ಮಣಿಪಾಲ 19ನೇ ನವೆಂಬರ್ 2022:ಆಂಟಿಮೈಕ್ರೊಬಿಯಲ್ (ಸೂಕ್ಷ್ಮಜೀವಿ) ನಿರೋಧಕ ದೋಷಗಳಿಂದ ಯಾರಾದರೂ, ಯಾವುದೇ ವಯಸ್ಸಿನವರು , ಯಾವುದೇ ರಾಷ್ಟ್ರದವರು ಸೋಂಕುಗಳಿಗೆ ಬಲಿಯಾಗಬಹುದು. ಸರಿಯಾದ ಮೇಲ್ವಿಚಾರಣೆ ಮತ್ತು ಸಲಹೆಯಿಲ್ಲದೆ ನೀವು ಹೆಚ್ಚು ಪ್ರತಿಜೀವಕಗಳನ್ನು ತೆಗೆದುಕೊಂಡರೆ, ನಿಮ್ಮ ವೈದ್ಯರಿಗೆ ನಿಮ್ಮ ಸೋಂಕಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ ಮತ್ತು ಈ ತೊಂದರೆಗೆ ಕಾರಣವೆಂದರೆ ಆಂಟಿಮೈಕ್ರೊಬಿಯಲ್ ಪ್ರತಿರೋಧದಿಂದಾಗುವ ಪರಿಣಾಮ. ಪ್ರತಿ ವರ್ಷ, ಆಂಟಿಮೈಕ್ರೊಬಿಯಲ್ ಪ್ರತಿರೋಧವು ಭಾರತದಲ್ಲಿ 5-10% ರಷ್ಟು ಹೆಚ್ಚಾಗುತ್ತಿದೆ. 2019 ರಲ್ಲಿ ಆಂಟಿಮೈಕ್ರೊಬಿಯಲ್ ಪ್ರತಿರೋಧದ ಸಾವುಗಳು ಜಗತ್ತಿನಾದ್ಯಂತ 1.27 ಮಿಲಿಯನ್ ಆಗಿದ್ದು, ಕೋವಿಡ್‌ನಿಂದ ಡಿಸೆಂಬರ್ 2020 ರಲ್ಲಿ 2/3 ಕ್ಕಿಂತ ಹೆಚ್ಚು ಸಾವುಗಳು ಸಂಭವಿಸಿವೆ.

ವಿಶ್ವ ಆಂಟಿಮೈಕ್ರೊಬಿಯಲ್ ಪ್ರತಿರೋಧಕ ಜಾಗೃತಿ ಸಪ್ತಾಹ (WAAW)ದ ಮೂಲಕ ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕರಲ್ಲಿ ಆಂಟಿಮೈಕ್ರೊಬಿಯಲ್ ಪ್ರತಿರೋಧದ ಕುರಿತು ಜಾಗೃತಿ ಮತ್ತು ಅರಿವು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಒಬ್ಬ ಆರೋಗ್ಯ ಪಾಲುದಾರರು , ನೀತಿ ರೂಪಕರು, ಮತ್ತು ಎಲ್ಲರು ಆಂಟಿಮೈಕ್ರೊಬಿಯಲ್ ಪ್ರತಿರೋಧದ ಪರಿಚಯ ಮತ್ತು ಹರಡುವಿಕೆಯನ್ನು ತಡೆಯಲು ನಿರ್ಣಾಯಕರಾಗಿದ್ದಾರೆ. “ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ಒಟ್ಟಿಗೆ ಸೇರಿ ತಡೆಗಟ್ಟುವುದು” ಈ ವರ್ಷದ ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ಸಪ್ತಾಹದ ದ್ಯೇಯ ವಾಕ್ಯವಾಗಿದೆ. ಆ್ಯಂಟಿಬಯೋಟಿಕ್‌ಗಳ ಜವಾಬ್ದಾರಿಯುತ ಬಳಕೆಯನ್ನು ಬೆಂಬಲಿಸಲು ಮತ್ತು ಆಂಟಿಮೈಕ್ರೊಬಿಯಲ್ ಪ್ರತಿರೋಧ ತಡೆಗಟ್ಟುವ ತಂತ್ರಗಳನ್ನು ಅಭಿವೃದ್ಧಿಪಡಿಸಲು ಎಲ್ಲಾ ವಲಯಗಳು ಜೊತೆಯಾಗಿ ಈ ಅಭಿಯಾನವನ್ನು ಒಂದು ಚೌಕಟ್ಟಿನಡಿ ನಡೆಸಬೇಕಿದೆ. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ), ಮಣಿಪಾಲವು ಸಮುದಾಯ ಮತ್ತು ಸಂಬಂಧಿತರಲ್ಲಿ ಜಾಗೃತಿ ಮೂಡಿಸಲು ಹಲವಾರು ಚಟುವಟಿಕೆಗಳೊಂದಿಗೆ ಈ ಪ್ರಯತ್ನಗಳಿಗೆ ಕೈ ಜೋಡಿಸಲಿದೆ. ಸೆಂಟರ್ ಫಾರ್ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಅಂಡ್ ಎಜುಕೇಶನ್ (CARE) ಅಡಿಯಲ್ಲಿ ಆಂಟಿಮೈಕ್ರೊಬಿಯಲ್ ಪ್ರತಿರೋಧಕವನ್ನು ಎದುರಿಸಲು ಚಟುವಟಿಕೆಗಳ ಮುಖ್ಯಸ್ಥರಿರುವ ತಜ್ಞರ ಗುಂಪನ್ನು ಸಂಸ್ಥೆ ಹೊಂದಿದೆ. ಈ ವರ್ಷ ಕೇಂದ್ರವು ಮಣಿಪಾಲ-ಬಯೋಮೆರಿಯಕ್ಸ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಜೊತೆಗೆ ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಮತ್ತು ಪ್ರಮುಖ ಸೈಕ್ಲಿಂಗ್ ಕ್ಲಬ್‌ಗಳಾದ ರೈಡ್ ಫಾರ್ ಹೆಲ್ತ್ ಮತ್ತು ಉಡುಪಿ ಸೈಕ್ಲಿಂಗ್ ಕ್ಲಬ್‌ನೊಂದಿಗೆ ಕೈಜೋಡಿಸಿ ಜಾಗೃತಿ ಸರಣಿ ಚಟುವಟಿಕೆಗಳನ್ನು ಆಯೋಜಿಸುತ್ತಿದೆ.

ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ವಿರುದ್ಧದ ನಮ್ಮ ಹೋರಾಟವು ಸಾರ್ವಜನಿಕರು, ವೈದ್ಯರು, ಔಷಧಿಕಾರರು, ಪಶುವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ನವೆಂಬರ್ 19 ರಂದು ಉಡುಪಿಯ ವೈದ್ಯರಿಗೆ ಭಾರತೀಯ ವೈದ್ಯರ ಸಂಘ (ಐಎಂಎ) ಭವನದಲ್ಲಿ ನಿರಂತರ ವೈದ್ಯಕೀಯ ಶಿಕ್ಷಣವನ್ನು ನಡೆಸಲಾಗುವುದು. 20 ನವೆಂಬರ್, 2022 ರಂದು, ಸಮುದಾಯದಲ್ಲಿ ಜಾಗೃತಿ ಮೂಡಿಸಲು ಸೈಕಲ್ ಜಾಥಾ ನಡೆಸಲಾಗುತ್ತದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗದ ಮುಂಭಾಗದಲ್ಲಿ ಮಾಹೆ ಮಣಿಪಾಲದ ಉಪಕುಲಪತಿ, ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ.ವೆಂಕಟೇಶ್ ಅವರು ಬೆಳಗ್ಗೆ 6:45ಕ್ಕೆ ಈ ಸೈಕಲ್ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಈ ವಾರದಲ್ಲಿ ವೈದ್ಯಕೀಯ ಔಷಧಿಕಾರರಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿದೆ . ಈ ಕಾರ್ಯಕ್ರಮವು ಆಂಟಿಬಯೋಟಿಕ್‌ಗಳ ಸರಿಯಾದ ವಿತರಣಾ ಅಭ್ಯಾಸಗಳ ಪ್ರಾಮುಖ್ಯತೆಯ ಬಗ್ಗೆ ಅವರಿಗೆ ಶಿಕ್ಷಣ ನೀಡಲಿದೆ.

ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ. ವೈದ್ಯರ ಔಷಧ ಚೀಟಿ ಇಲ್ಲದೆ ಪ್ರತಿಜೀವಕಗಳನ್ನು (ಆ್ಯಂಟಿಬಯೋಟಿಕ್) ತೆಗೆದು ಕೊಳ್ಳದಿರುವುದು, ವೈದ್ಯರ ಸಲಹೆಯಂತೆ ಡೋಸ್ ಅನ್ನು ಪೂರ್ಣಗೊಳಿಸುವುದು, ವೈದ್ಯರ ಔಷಧ ಚೀಟಿ ಇಲ್ಲದೆ ಔಷಧಾಲಯಗಳಿಂದ ಪ್ರತಿಜೀವಕಗಳನ್ನು ಖರೀದಿಸದಿರುವುದು, ಹಿಂದಿನ ಉಳಿದ ಪ್ರತಿಜೀವಕಗಳನ್ನು ತೆಗೆದುಕೊಳ್ಳದಿರುವುದು, ಉಳಿದಿರುವ ಪ್ರತಿಜೀವಕಗಳನ್ನು ಸರಿಯಾಗಿ ವಿಲೇವಾರಿ ಮಾಡದಿರುವುದು, ನಿಮ್ಮ ಪ್ರತಿಜೀವಕಗಳನ್ನು ನಿಮ್ಮ ಕುಟುಂಬದ ಇತರರೊಂದಿಗೆ ಹಂಚಿಕೊಳ್ಳದಿರುವ ಒಂದು ಸಣ್ಣ ಹೆಜ್ಜೆಯೊಂದಿಗೆ ಇದು ಪ್ರಾರಂಭವಾಗುತ್ತದೆ. ಪ್ರತಿ ಸಣ್ಣ ಪ್ರಯತ್ನವು ಆಂಟಿಮೈಕ್ರೊಬಿಯಲ್ ಪ್ರತಿರೋಧ ಮತ್ತು ಸಾವನ್ನು ತಡೆಯಲು ನಮಗೆ ಸಹಾಯ ಮಾಡುತ್ತದೆ. ಈ ಅಭಿಯಾನಗಳಲ್ಲಿ ಸಾಮಾಜಿಕ ಭಾಗವಹಿಸುವಿಕೆಯು ಉತ್ತಮ ನಾಳೆಗಾಗಿ ಪ್ರಮುಖ ಪರಿಣಾಮವನ್ನು ಉಂಟುಮಾಡಬಹುದು. ಈ ಪ್ರಯತ್ನದಲ್ಲಿ ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಮಾಹೆ ಮಣಿಪಾಲವು ನಿರೀಕ್ಷಿಸುತ್ತದೆ.

Cars Collective

Related Posts

Leave a Reply

Your email address will not be published.