ಉದ್ಯಮಿ ಜಾರ್ಕಳ ಅಜಿತ್ ಹೆಗ್ಡೆ ನಿಧನ
ಕಾರ್ಕಳ ತಾಲೂಕಿನ ಉದ್ಯಮಿ, ಸಾಮಾಜಿಕ ಕಾರ್ಯಕರ್ತರು ಹಾಗೂ ಕಾರ್ಕಳದ ಲತಾ ಮೆಡಿಕಲ್ಸ್‍ನ ಸ್ಥಾಪಕರಾದ ಜಾರ್ಕಳ ಅಜಿತ್ ಹೆಗ್ಡೆ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರ ಅಂತಿಮ ದರ್ಶನವು ಸೆ.30ರಂದು ಬೆಳಗ್ಗೆ 8.30ರಿಂದ 10ರ ವರೆಗೆ ಕಾರ್ಕಳದ ತೆಳ್ಳಾರ್ ರಸ್ತೆಯಲ್ಲಿರುವ ಸ್ವಗೃಹ ಕಸ್ತೂರಿಯಲ್ಲಿ ನಡೆಯಲಿದೆ. ನಂತರ ಮಧ್ಯಾಹ್ನ 12.30ಕ್ಕೆ ನಿಂಜೂರು ಪಡುಮನೆ ಎಂಬಲ್ಲಿ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.