ವಿದ್ಯಾರ್ಥಿಗಳು ಅಮಿಷಗಳಿಗೆ ಬಲಿಯಾಗದೆ ಜಾಗೃತರಾಗಿರಿ :ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ

ಶಾಲೆಗೆ ಹೋಗುವ ವಿದ್ಯಾರ್ಥಿಗಳು ವಿನಾಕಾರಣ ಸಲಿಗೆ ವಹಿಸುವ ಪರಕೀಯರಿಂದ ಜಾಗರೂಕತೆಯಿಂದ ಇರಬೇಕು. ಅಮಲು ಪದಾರ್ಥಗಳು, ಅಥವ ಬೇರೆ ಶಾರೀರಿಕ ರೀತಿಯಲ್ಲಿ ಬಳಸಿಕೊಂಡು ಹಾನಿಗೊಳಗಾಗದ ಹಾಗೆ ಶಿಕ್ಷಣದೊಂದಿಗೆ ತಮ್ಮ ಎಚ್ಚರಿಕೆಯಿಂದ ಇರಬೇಕು ಎಂದು ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ನುಡಿದರು. ಅವರು ಬಂಟ್ವಾಳ ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್ ವತಿಯಿಂದ ಒಂದು ದಿನದ ತರಭೇತಿಯನ್ನು ವಿದ್ಯಾರ್ಥಿಗಳಿಗೆ ಉದ್ಘಾಟನೆ ಮಾಡಿ ಮಾತನಾಡಿದರು.

ಮುಖ್ಯ ಅತಿಥಿ ಡಾ ಸುರೇಶ ನೆಗಳಗುಳಿ ಮಾತನಾಡಿ, ಮಹತ್ವದ ಗಟ್ಟದ ಬೆಳವಣಿಗೆಯ ಸಮಯದಲ್ಲಿ ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿದರೆ ಬಹಳ ಕಷ್ಟ. ತರಭೇತಿಯನ್ನು ಪಡೆದು ಹೊಸ ಸಂಗತಿಗಳು ತಿಳಿಯಲು ಅನುಕೂಲ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಸಂಚಾಲಕ ಖ್ಯಾತ ವೈದ್ಯ ಡಾ ವಿಶ್ವನಾಥ ನಾಯಕ್ ಮಾತನಾಡಿ, ವಿದ್ಯಾರ್ಥಿ ಜೀವನ ಫಾರ್ಮೇಶನ್ ಸಮಯ.ನಾವು ನಮ್ಮ ಶಾಲೆಯಲ್ಲಿ ಅತ್ಯುತ್ತಮ ನೀಡುವ ಮೂಲಕ ದೇಶದ ಒಳ್ಳೆಯ ಪ್ರಜೆಗಳು ಆಗಲು ಶಿಕ್ಷಣದ ಒಟ್ಟಿಗೆ ಸಹಕಾರ ನೀಡುತ್ತವೆ ಎಂದರು. ಮೊದಲಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ದ ಕ ಅದ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ ನಿರೂಪಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಭೋಜ ಅವರು ವಂದಿಸಿದರು. ತರಬೇತುದಾರ ರೋಹನ್ ಸಿರಿ ಮತ್ತು ಶೆಣೈ ವೇದಿಕೆಯಲ್ಲಿ ಇದ್ದರು. ನೂರು ಮಕ್ಕಳು ಒಂದು ದಿನದ ತರಭೇತಿಯನ್ನು ಪಡೆದರು.
