ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಭಿವೃದ್ಧಿ ಬಗ್ಗೆ ಸ್ವರ್ಣ(ಅಷ್ಟಮಂಗಲ) ಪ್ರಶ್ನಾಚಿಂತನೆ

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಲ್ಲಿ ಕ್ಷೇತ್ರದ ಮುಂದಿನ ಅಭಿವೃದ್ಧಿಯ ಕಾರ್ಯ ದ ಪ್ರಯುಕ್ತ ಸ್ವರ್ಣ(ಅಷ್ಟಮಂಗಲ )ಪ್ರಶ್ನಾಚಿಂತನೆಯು ದೈವಜ್ಞರಾದ ಜೋತಿಷ್ಯ ತಿಲಕಂ ಶಶಿಧರ್ ಮಾಂಗಾಡ್, ರಾಜೇಶ್ ಇರಿಯ, ಗೋಪಾಲ ಕೃಷ್ಣ ಕುಲಾಲ್ ವಾಂತಿಚಾಲ್ ಇವರ ಮೂಲಕ ಆರಂಭಗೊಂಡಿದ್ದು ದಿನಾಂಕ 13.09.2022 ರಿಂದ ಪ್ರಶ್ನಾಚಿಂತನ ಪ್ರಾರಂಭ ಗೊಂಡಿದ್ದು .

ಈ ಸಂಧರ್ಭ ದಲ್ಲಿ ಶ್ರೀ ಕೇತ್ರದ ಪ್ರಧಾನ ಅರ್ಚಕರಾದ (ಶಾಂತಿ ) ಶಿವಾನಂದ ಶಾಂತಿ ಅಧ್ಯಕ್ಷ ರಾದ ಪೀತಾಂಬರ ಹೆರಾಜೆ, ಗೌರವಾಧ್ಯಕ್ಷರಾದ ಜಯಂತನಡುಬೈಲ್, ಕ್ಷೇತ್ರದ ಶ್ರೀಧರ ಪೂಜಾರಿ, ಉಪಾಧ್ಯಕ್ಷ ರಾದ ರವಿಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ನವೀನ್ ಚಂದ್ರಶೇಖರ ಮಾರ್ಕಮೆ ಸುವರ್ಣ, ಶೇಖರ್ ಬಂಗೇರ, ಶ್ರೀ ಕ್ಷೇತ್ರದ ವಕ್ತರ ರಾಜೇಂದ್ರ ಚಿಲಿಂಬಿ, ದೀಪಕ್ ಸಜಿಪ ನಾರಾಯಣ ಮಚ್ಚಿನ ಹಾಗೂ ಶ್ರೀಧರ ಪೂಜಾರಿ ಕುಟುಂಬಸ್ಥರು ಉಪಸ್ಥಿತರಿದ್ದರು.