ಹೆಜಮಾಡಿಕೋಡಿ ವಿದ್ಯಾಪ್ರಸಾರ ವಿದ್ಯಾ ಮಂದಿರ : ಪ್ರತಿಭಾನ್ವೇಷಣಾ ಕಾರ್ಯಕ್ರಮ-2023

ಹೆಜಮಾಡಿಕೋಡಿ ವಿದ್ಯಾ ಪ್ರಸಾರ ವಿದ್ಯಾ ಮಂದಿರದಲ್ಲಿ ಪ್ರತಿಭಾನ್ವೇಷಣೆ ಕಾರ್ಯಕ್ರಮವು ಜರುಗಿತು. ಸ್ಥಳೀಯ 6 ವರ್ಷದ ಒಳಗಿನ ಪುಟಾಣಿ, ಮಕ್ಕಳ ಪ್ರತಿಭೆಯನ್ನು ವ್ಯಕ್ತ ಪಡಿಸಲು ವೇದಿಕೆಯನ್ನು ನಿರ್ಮಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಮೋಜಿನ ಆಟಗಳನ್ನು ಅಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅದ್ರಷ್ಟಶಾಲಿ ಮಗುವನ್ನು ಆಯ್ಕೆ ಮಾಡಿ, ಆ ಮಗುವಿಗೆ ಒಂದು.. ವರ್ಷದ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಲಾಯಿತು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ವೈಧ್ಯಾಧಿಕಾರಿ ಡಾ.ಕ್ರಷ್ಣ ಹೆಲ್ತ್ ಕೇರ್ ಸೆಂಟರ್ ಮುಲ್ಕಿ ಹಾಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ದಯಾನಂದ ಹೆಜಮಾಡಿ, ಗೌರವ ಅಧ್ಯಕ್ಷರಾದ ವಿನೋದ್ ಕೋಟ್ಯಾನ್, ಕೋಶಾಧಿಕಾರಿ ವಿಕ್ರಂ ರಾಜ್ ಹಾಗೂ ಪ್ರಾಂಶುಪಾಲರಾದ ಸುನಿಲ್ ಕುಮಾರ್, ಉಪ ಪ್ರಾಂಶುಪಾಲರಾದ ರಾಜೇಶ್ವರಿ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ರಾಜೇಶ್ವರಿ ಹಾಗೂ ಸಹಶಿಕ್ಷಕಿ ಅರ್ಪಿತಾ ದೇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿ ಪ್ರಿಯಾ ರವರು ನೆರವೇರಿಸಿದರು.
