ಸಿದ್ದರಾಮಯ್ಯ ಅವರನ್ನು ಹತ್ಯೆ ಮಾಡಬೇಕು ಎಂದು ಹೇಳಿಕೆ ನೀಡಿದ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಸೂಕ ಕ್ರಮ ಜರುಗಿಸಲು ಪೋಲಿಸ್ ಇಲಾಖೆಗೆ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಆಗ್ರಹ

ವಿಟ್ಲ:- ಕರ್ನಾಟಕ ರಾಜ್ಯ ಕಂಡ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಬಡವರ ಬಂಧು ವಿಧಾನ ಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿಯ ಸಚಿವ ಅಶ್ವಥ್ ನಾರಾಯಣ್ ಅವರು ಟಿಪ್ಪುವನ್ನು ಹೊಡೆದು ಹಾಕಿದಂತೆ ಹೊಡೆದು ಹಾಕಬೇಕು ಎಂದು ಹೇಳುವ ಮೂಲಕ ಪ್ರಚೋಧನೆ ಮತ್ತು ಕುಮ್ಮಕ್ಕು ಕೊಡುವ ಹೇಳಿಕೆ ನೀಡಿರುವುದನ್ನು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಚಿವರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಡಿಸಿಸಿ ಮಾಜಿ ಮಾಧ್ಯಮ ವಕ್ತಾರ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಆಗ್ರಹಿಸಿದ್ದಾರೆ.
ಬಿಜೆಪಿಯು ಸಮಾಜದಲ್ಲಿ ಕೋಮು ಸಂಘರ್ಷಣೆ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದೆಒಬ್ಬ ಸಚಿವರಾಗಿ ಅಶ್ವಥ್ ನಾರಾಯಣ್ ಅವರು ನೀಡುವ ಇಂತಹ ಹೇಳಿಕೆಗಳೇ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ ಇಂತಹ ಸಚಿವನ ವಿರುದ್ಧ ಉನ್ನತಮಟ್ಟದಲ್ಲಿ ಪೋಲಿಸ್ ಇಲಾಖೆ ಸೂಕ್ತ ಪ್ರಕರಣ ದಾಖಲಿಸಿ ತನಿಖೆ ಮಾಡುವಂತೆ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಆಗ್ರಹಿಸಿದ್ಧಾರೆ.
