ಕಡಬ : ಮಾನಭಂಗ ಯತ್ನ ಪ್ರಕರಣ ಹಿನ್ನಲೆ – ಸಂತ್ರಸ್ತೆ ಮನೆಗೆ ಸಚಿವ ಎಸ್ ಅಂಗಾರ ಭೇಟಿ

ಕಾಣಿಯೂರು: ಬೆಡ್‌ಶೀಟ್ ಮಾರಾಟಕ್ಕೆಂದು ಕಾರಲ್ಲಿ ಬಂದಿದ್ದ ಇಬ್ಬರು ಆರೋಪಿಗಳಿಂದ ಮಾನಭಂಗ ಯತ್ನ ನಡೆದಿರುವ ಹಿನ್ನಲೆಯಲ್ಲಿ ಸಂತ್ರಸ್ತೆ ಮಹಿಳೆ ಮನೆಗೆ ಸಚಿವ ಎಸ್. ಅಂಗಾರ ಅ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬೆಡ್ ಶೀಟ್ ಮಾರಾಟಕ್ಕೆಂದು ಬಂದಿದ್ದ ಇಬ್ಬರು ಆರೋಪಿಗಳು ತನ್ನ ಮೇಲೆ ಮಾನಭಂಗ ಯತ್ನಿಸಿರುವ ಬಗ್ಗೆ ರಫಿಕ್ ಮತ್ತು ರಮೀಜುದ್ದೀನ್ ಎಂಬವರ ವಿರುದ್ಧ ದೋಳ್ಪಾಡಿ ಗ್ರಾಮದ ಕಟ್ಟ ಪರಿಶಿಷ್ಠ ಜಾತಿ ಮಹಿಳೆಯೋರ್ವರು ಅ.20ರಂದು ಕಡಬ ಪೋಲಿಸ್ ಠಾಣೆಗೆ ನೀಡಿರುವ ದೂರಿನಂತೆ ಮಾನಭಂಗ ಯತ್ನ ಪ್ರಕರಣ ದಾಖಲಾಗಿತ್ತು.

s angara

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್. ಅಂಗಾರ ಅವರು, ದೋಳ್ಪಾಡಿ ಕಟ್ಟ ಎಂಬಲ್ಲಿ ಮಹಿಳೆ ಮೇಲೆ ನಡೆದಿರುವ ಅತ್ಯಾಚಾರ ಘಟನೆ ಖಂಡನೀಯ. ದೋಳ್ಪಾಡಿಯಲ್ಲಿ ಮಹಿಳೆ ಮೇಲೆ ನಡೆದಿರುವ ಘಟನೆಯನ್ನು ಮರೆಮಾಚುವ ನಿಟ್ಟಿನಲ್ಲಿ ಸಾರ್ವಜನಿಕ ವಲಯಗಳಲ್ಲಿ ತಪುö್ಪ ಅಭಿಪ್ರಾಯವನ್ನು ಮೂಡಿಸುವ ಕೆಲಸ ಕೆಎಫ್‌ಡಿ, ಎಸ್‌ಡಿಪಿಐ ಮತ್ತು ಕಾಂಗ್ರೇಸ್‌ನವರಿoದ ಹುನ್ನಾರಗಳು ನಡೆಯುತ್ತಿದ್ದು, ವಾಸ್ತಾವಿಕವಾಗಿ ಸತ್ಯ ಅಂಶವನ್ನು ಹೇಳದೇ ಮುಸಲ್ಮಾನರ ಮೇಲೆ ಹಲ್ಲೆ ನಡೆದಿದೆ ಎಂಬ ಅಪಪ್ರಚಾರವನ್ನು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸಂಬAದಪಟ್ಟ ಇಲಾಖೆ, ಸರಕಾರ ಮಾಡುತ್ತದೆ ಎಂದು ತಿಳಿಸಿದ್ದಾರೆ.

s angara

ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸು, ಚಾರ್ವಾಕ ಸಿ.ಎ ಬ್ಯಾಂಕ್ ಅಧ್ಯಕ್ಷ ಆನಂದ ಗೌಡ ಮೇಲ್ಮನೆ ಹಾಗೂ ಸ್ಥಳೀಯ ಗ್ರಾ.ಪಂ.ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.


fathermuller

Related Posts

Leave a Reply

Your email address will not be published.