ಕಾರ್ಕಳ : 18 ಸೆನ್ಸ್ ಜಾಗದಲ್ಲಿ ಅನಂತ ಕೃಷ್ಣ ಟ್ರಸ್ಟ್ ಗೋಶಾಲೆ ನಿರ್ಮಾಣ

ಕಾರ್ಕಳ ತಾಲೂಕಿನಲ್ಲಿ ಗೋಪ್ರೇಮಿ ಕುಟುಂಬವೊAದು ಇದ್ದು, ಒಂದೇ ಸೂರಿನಡಿ 116 ದನ ಕರುಗಳನ್ನು ಸಾಕಿ ಸಲುಹುತ್ತಿದ್ದಾರೆ. 18 ಸೆನ್ಸ್ ಜಾಗದಲ್ಲಿ ಅನಂತ ಕೃಷ್ಣ ಟ್ರಸ್ಟ್ ಎಂಬ ಗೋಶಾಲೆಯನ್ನು ನಿರ್ಮಿಸಿ ದನಕರುಗಳ ಪೋಷಣೆ ಮಾಡುತ್ತಿದ್ದಾರೆ. ಆದರೆ ಜಾಗದ ಕೊರತೆಯಿಂದ ದನಕರುಗಳನ್ನು ಸಾಕಲು ತೊಂದರೆ ಅನುಭವಿಸುತ್ತಿದ್ದಾರೆ.

goshale

ರಾಮ, ಭೀಮ, ಸುಂದರ ಸೀತಾ, ಗೀತಾ ಎಂಬ ಹಲವಾರು ಹೆಸರುಗಳಿರುವ 116 ದನ ಕರುಗಳು ಕೇವಲ 18 ಸೆನ್ಸ್ ಜಾಗದಲ್ಲಿ ಅತಿ ಜಾಗರೂಕತೆಯಿಂದ ಸಾಕುತ್ತಿರುವ ಅರ್ಚಕ ಗೋಪಿನಾಥ್ ಪುರಾಣಿಕ ಹಾಗೂ ಅವರ ಪತ್ನಿ ಭಾಗಿರತಿ ಪುರಾಣಿಕ್. ಕಾರ್ಕಳ ಬಂಡಿ ಮಠ ಬಸ್ ನಿಲ್ದಾಣದ ಬಳಿ ಕೇವಲ 18 ಸೆನ್ಸ್ ಜಾಗದಲ್ಲಿ ಅನಂತ ಕೃಷ್ಣ ಟ್ರಸ್ಟ್ ಎಂಬ ಗೋಶಾಲೆ ನಿರ್ಮಿಸಿ ಸುಮಾರು 116 ದನ ಕರುಗಳನ್ನು ಒಂದೇ ಸೂರಿ ನಡಿ ಎಂಟು ಮಂದಿ ಕೆಲಸದವರ ಸಹಾಯದಿಂದ ದನಗಳನ್ನು ಸಾಕುತ್ತಿದ್ದಾರೆ. ಈ ಗೂಶಾಲೆಯಲ್ಲಿ ಗೋಕಳ್ಳರಿಂದ ಹಾಗೂ ಕಟುಕರಿಂದ ರಕ್ಷಿಸಲ್ಪಟ್ಟ ಗೋವುಗಳನ್ನು ಪೊಲೀಸರು ಇಲ್ಲೇ ತಂದು ಬಿಡುತ್ತಾರೆ. ನಮ್ಮ ಗೊಶಾಲೆಯಲ್ಲಿ ಗಂಡು ಕರುಗಳ ಸಂಖ್ಯೆಯೇ ಹೆಚ್ಚು. ಅದಲ್ಲದೆ ಅಂಗವಿಕಲ ದನಕರುಗಳನ್ನು ಸಾಕಲು ಆಗದೆ ಅದರ ಸಾಕುವ ವೆಚ್ಚವನ್ನು ನಾವು ಕೊಡುತ್ತೇವೆ ಎಂದು ಹೇಳಿ ಜಾನುವಾರುಗಳನ್ನು ನಮ್ಮಲ್ಲಿ ಬಿಟ್ಟು ಹೋಗುತ್ತಾರೆ ಎನ್ನುತ್ತಾರೆ ಅರ್ಚಕ ಗೋಪಿನಾಥ್ ಪುರಾಣಿಕ್

goshale


ನಮ್ಮ ಕುಟುಂಬದವರು ಈ ಪುಣ್ಯ ಕಾರ್ಯವನ್ನು ಸುಮಾರು 176 ವರ್ಷದಿಂದ ಮಾಡುತ್ತಾ ಬಂದಿರುತ್ತಾರೆ. ನಮಗೆ ಎಷ್ಟು ಕಷ್ಟ ಬಂದರೂ ಈ ಗೋ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿರುತ್ತೇವೆ. ನಮಗೆ ಇಲ್ಲಿರುವ ದನಗಳಿಂದ ದಿನಕ್ಕೆಸುಮಾರು 3000 ದವರೆಗೆ ಹಾಲನ್ನು ಮಾರಲಿಕ್ಕೆ ಸಿಗುತ್ತದೆ ನಮಗೆ ಈ 116ಗಳ ದನಗಳನ್ನು ಸಾಕಲಿಕ್ಕೆ ದಿನಕ್ಕೆ 22 ಸಾವಿರ ಖರ್ಚಾಗುತ್ತದೆ. ಕೆಲವು ಕೆಲವು ಗೋ ಪ್ರೇಮಿಗಳು ದೇಣಿಗೆಯನ್ನು ಕೊಡುತ್ತಾ ಬಂದಿರುತ್ತಾರೆ. ಅದಲ್ಲದೆ ನಮಗೆ ಇಷ್ಟು ಸಣ್ಣ ಸ್ಥಳದಲ್ಲಿ ಧನಗಳನ್ನು ಸಾಕಲು ತುಂಬಾ ಕಷ್ಟವಾಗುತ್ತದೆ. ಯಾರಾದರೂ ಸರಕಾರದಿಂದ ಆಗಲಿ ವೈಯಕ್ತಿಕ ರೂಪದಲ್ಲಿ ದಾನಿಗಳು ಒಂದೆರಡು ಎಕರೆ ಸ್ಥಳವನ್ನು ನಮಗೆ ನೀಡಿದರೆ ನಾವು ಸುಸಜ್ಜಿತ ಗೋಶಾಲೆ ನಿರ್ಮಿಸಿ ಈ ಗೋವುಗಳನ್ನು ಇನ್ನೂ ಉತ್ತಮ ರೀತಿಯಿಂದ ಸಾಕುತ್ತೇವೆ ಎಂದು ಮಾಧ್ಯಮದ ಮುಂದೆ ಹೇಳಿದರು.

goshale

ಒಟ್ಟಿನಲ್ಲಿ ಗೋಪ್ರೇಮಿಗಳಾದ ಕಾರ್ಕಳದ ಗೋಪಿನಾಥ್ ಪುರಾಣಿಕ್ ಅವರಿಗೆ ದನಕರುಗಳನ್ನು ಸುಸಜ್ಜಿತ ರೀತಿಯಲ್ಲಿ ಸಾಕಿ ಸಲಹಲು ಜಾಗದ ಅಗತ್ಯವಿದ್ದು ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

Related Posts

Leave a Reply

Your email address will not be published.