ಬೆಳುವಾಯಿ ನಿವಾಸಿ ಕುವೈಟ್‌ನಲ್ಲಿ ಸಾವು

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಕೆಸರ್‌ಗದ್ದೆಯ ನಿವಾಸಿಯೊಬ್ಬರು ಕುವೈಟ್‌ನಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾದ ಘಟನೆ ಸೋಮವಾರ ನಡೆದಿದೆ. ಮೃತ ವ್ಯಕ್ತಿ ರೋಷನ್ ಹೆಗ್ಡೆ (46)ಎಂದು ತಿಳಿದುಬಂದಿದೆ. ಇವರು ನಿವೃತ್ತ ಶಿಕ್ಷಕಿ ಕೆಸರ್‌ಗದ್ದೆಯ ನಳಿನಿ ರಾಮಚಂದ್ರ ಹೆಗ್ಡೆ ಅವರ ಪುತ್ರ. ಕಳೆದ ತಿಂಗಳು ತನ್ನ ಮಾವನ ಮಗನ ಮದುವೆ ಕಾರ್ಯಕ್ರಮಕ್ಕೆ ಪತ್ನಿ ಹಾಗೂ ಮಗನೊಂದಿಗೆ ಊರಿಗೆ ಬಂದಿದ್ದ ಅವರು ಕಾರ್ಯಕ್ರಮ ಮುಗಿಸಿ ಕುವೈಟ್‌ಗೆ ವಾಪಾಸಾಗಿದ್ದರು. ಸೋಮವಾರ ಬೆಳಿಗ್ಗೆ ಮನೆಯಿಂದ ಕಚೇರಿಗೆ ಕೆಲಸಕ್ಕೆಂದು ಹೊರಟಾಗ ಅವರಿಗೆ ಎದೆನೋವು ಕಾಣಿಸಿಕೊಂಡು ನಂತರ ಕುಸಿದುಬಿದ್ದು ಸಾವನಪ್ಪಿದ್ದಾರೆ ಎನ್ನಲಾಗಿದೆ. ಪತ್ನಿ ಹಾಗೂ 13 ವರ್ಷದ ಪುತ್ರ ಇದ್ದಾರೆ
