ಪುತ್ತೂರು ಐಕ್ಯತಾ ಯಾತ್ರೆಗೆ ಚಾಲನೆ

ದೇಶದ ಐಕ್ಯತೆಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರು ವಯನಾಡು ಸಂಸದರು ರಾಹುಲ್ ಗಾಂಧೀಜಿಯವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 6 ತಿಂಗಳ ಕಾಲ ಸುಮಾರು 3574 ಕಿಮೀ ಭಾರತ ಐಕ್ಯತಾ ಯಾತ್ರೆ ಪಾದಯಾತ್ರೆ ಇಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡಿದೆ.

ಈ ಯಾತ್ರೆಯ ಯಶಸ್ಸಿಗಾಗಿ ಸರ್ವ ಧರ್ಮಗಳ ಪ್ರಾರ್ಥನಾ ಕೇಂದ್ರಗಳಲ್ಲಿ ಪ್ರಾರ್ಥಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಡಿ ಕೆ ಶಿವಕುಮಾರ್ ಸೂಚನೆ ಮೇರೆಗೆ ಕೆಪಿಸಿಸಿ ಸಂಯೋಜಕರು ಕಾವು ಹೇಮನಾಥ್ ಶೆಟ್ಟಿ ಯವರ ನೇತೃತ್ವದಲ್ಲಿ ಪುತ್ತೂರಿನ ಕಾರಣೀಕ ಕ್ಷೇತ್ರವಾದ ಮಹತೋಭಾರ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ, ಪುತ್ತೂರಿನ ಜುಮ್ಮಾ ಮಸೀದಿಯ ದರ್ಗಾದಲ್ಲಿ, ಮ್ಯಾದೆ ದೇವುಸ್ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ, ಪುತ್ತೂರು ಪುರಸಭೆ ಮಾಜಿ ಅಧ್ಯಕ್ಷರು ಸೂತ್ರಬೆಟ್ಟು ಜಗನ್ನಾಥ ರೈ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ನೇಮಾಕ್ಷ ಸುವರ್ಣ, ರವಿಚಂದ್ರ ಆಚಾರ್ಯ, ಗಂಗಾಧರ ಶೆಟ್ಟಿ ಎಲಿಕ ಮೊದಲಾದವರು ಉಪಸ್ಥಿತರಿದ್ದರು.