ಸೇವಾಸಾಗರ ಟ್ರಸ್ಟ್ ಸಾಗರದ ನೂತನ ಕಟ್ಟಡದ ಶಿಲಾನ್ಯಾಸವನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನರ ಸೇವೆಗಾಗಿ ಸೇವಸಾಗರ ಟ್ರಸ್ಟ್ ಮುಂದೆ ಬಂದಿದ್ದು, ಇದೀಗ ನೂತನ ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಹೆಚ್ ಹರತಾಳು ಹಾಲಪ್ಪ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯವಾಹರಾದ ಪಟ್ಟಾಭಿರಾಮ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ ಎಸ್ ಗುರುಮೂರ್ತಿ, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಆ ಪು ನಾರಾಯಣಪ್ಪ, ನಗರ ಸಭೆ ಅಧ್ಯಕ್ಷರಾದ ಮಧುರ ಶಿವಾನಂದ್, ಆನಂದ್, ನವೀನ್,ಪ್ರವೀಣ, ವಾರ್ಡ್ ಸದಸ್ಯರಾದ ಸುಧ, ಮತ್ತಿತರ ಮುಖಂಡರು ಉಪಸ್ಥಿತರಿದ್ದರು

