ಪುತ್ತೂರಿನಲ್ಲಿ ರಸ್ತೆ ನಿರ್ಮಾಣಕ್ಕೆ ತಹಶೀಲ್ದಾರ್‍ಗೆ ಮನವಿ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಪಳ್ಳತ್ತೂರು -ಬಂಟಕಲ್ಲು-ಬಾರೆಕೊಚ್ಚಿ-ಕಟ್ಟತ್ತಾರು ಕಾಲನಿಗೆ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ರೈತ ಸಂಘ ಹಸಿರು ಸೇನೆ (ವಾಸುದೇವ ಬಣ) ಹಾಗೂ ಸ್ಥಳೀಯ ನಿವಾಸಿಗಳು ಪುತ್ತೂರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ಈ ಭಾಗದಲ್ಲಿ ಸುಮಾರು ೩೦ ಮನೆಗಳಿಗೆ ಸಂಪರ್ಕ ರಸ್ತೆಯಿಲ್ಲ. ಹಲವು ದಶಕಗಳಿಂದ ಇವರು ವಾಸಿಸುತ್ತಿದ್ದರೂ ಅನಾರೋಗ್ಯದಂತಹ ತುರ್ತು ಸಂದರ್ಭದಲ್ಲಿ ರೋಗಿಯನ್ನು ಹೊತ್ತುಕೊಂಡೇ ಸಾಗಬೇಕಾದ ಸ್ಥಿತಿ ಇದೆ. ಅಗತ್ಯ ಸಾಮಾಗ್ರಿಗಳನ್ನು ಕೊಂಡೊಯ್ಯಲೂ ಸಮಸ್ಯೆ ಇದೆ. ಸುಮಾರು ಅರ್ಧದಷ್ಟು ರಸ್ತೆಯನ್ನು ರೈತ ಸಂಘ ಹಾಗೂ ಸಥಳೀಯರ ನೆರವಿನಿಂದ ನಿರ್ಮಿಸಲಾಗಿದೆ. ಆದರೆ ೩೦-೫೦ ಮೀ. ನಷ್ಟು ರಸ್ತೆ ಬಾಕಿ ಉಳಿದಿದೆ ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ ಕರ್ನೂರುಗುತ್ತು ಹೇಳಿದರು.

ಸರಕಾರಿ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಈ ಹಿಂದೆ ತಹಶೀಲ್ದಾರ್ ಗುರುಮಾಡಿಕೊಟ್ಟಿದ್ದಾರೆ. ಆ ರಸ್ತೆ ನಿರ್ಮಾಣಕ್ಕೆ ಕೆಲವು ಅಡ್ಡಿ ಉಂಟುಮಾಡುತ್ತಿದ್ದಾರೆ. ಹಲವು ಕಾಲನಿ ಮಂದಿ ಹಾಗೂ ಇತರ ಹಲವು ಕುಟುಂಬಗಳಿಗೆ ರಸ್ತೆ ನಿರ್ಮಾಣದಿಂದ ಹೆಚ್ಚು ಅನುಕೂಲವಾಗಲಿದೆ. ಹಾಲಿ ಗುರುತಿಸಿರುವ ಸರಕಾರಿ ಜಾಗದಲ್ಲಿ ತಹಶೀಲ್ದಾರ್ ಅವರು ನೇತೃತ್ವ ವಹಿಸಿ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ಅವರು ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕೊಪ್ಪಳ, ಸ್ಥಳೀಯರಾದ ಜಯಾ ಕಟ್ಟತ್ತಾರು, ಸುಬ್ಬಣ್ಣ ಕಟ್ಟತ್ತಾರು, ಪದ್ಮಾವತಿ ಬಾರೆಕೊಚ್ಚಿ, ಸುಧಾಕರ ರೈ, ಶಿವಪ್ರಸಾದ್ ರೈ, ನಾರಾಯಣ ರೈ, ಪ್ರಶಾಂತ್ ರೈ ಮೊದಲಾದವರು ಉಪಸ್ಥಿತರಿದ್ದರು. ತಂಡದಿಂದ ತಹಶೀಲ್ದಾರ್ ನಿಸರ್ಗಪ್ರಿಯ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರಿಗೆ ಮನವಿ ನೀಡಲಾಯಿತು

Related Posts

Leave a Reply

Your email address will not be published.