HomeFresh Newsಪುತ್ತೂರು : ಬಿಜೆಪಿ ಶಾಂತಿಗೋಡಿನ 142 ನೇ ಬೂತ್ ನ ನೂತನ ಅಧ್ಯಕ್ಷರಾಗಿ ವಿನೋದ್ ಕರ್ಪುತಮೂಳೆ...

ಪುತ್ತೂರು : ಬಿಜೆಪಿ ಶಾಂತಿಗೋಡಿನ 142 ನೇ ಬೂತ್ ನ ನೂತನ ಅಧ್ಯಕ್ಷರಾಗಿ ವಿನೋದ್ ಕರ್ಪುತಮೂಳೆ ಆಯ್ಕೆ

ಪುತ್ತೂರು ಭಾರತೀಯ ಜನತಾ ಪಾರ್ಟಿ ಶಾಂತಿಗೋಡಿನ 142 ನೇ ಬೂತ್ ನ ನೂತನ ಅಧ್ಯಕ್ಷರಾಗಿ ವಿನೋದ್ ಕರ್ಪುತಮೂಳೆ, ಕಾರ್ಯದರ್ಶಿಯಾಗಿ ಗಣೇಶ್ ಪೇರಡ್ಕ ಆಯ್ಕೆಯಾದರು.

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ದೇವಪ್ಪ ಗೌಡ ಓಲಾಡಿಯವರ ಮನೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಹಿಳಾ ಮೋರ್ಚಾದ ಸದಸ್ಯೆ ಯಶೋಧ ಗೌಡ ಪ್ರಭಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಬೂತ್ ಸದಸ್ಯರಾಗಿ ಪ್ರವೀಣ್ ಕಲ್ಕಾರ್, ರೂಪ ಪರಕಮೆ, ಹರೀಶ್ ಕರ್ಬಡ್ಕ, ಪ್ರವೀಣ್ ಶೆಟ್ಟಿ ಕುದುರೆಪಾಡ್ಡಿ, ಅಕ್ಷಿತಾ, ರವೀಂದ್ರ ಕಲ್ಕಾರ್, ರುಕ್ಮಯ್ಯ ಕಕ್ವೆ, ಬಾಬು ಗೌಡ ಕೈಂದಾಡಿ, ಯುವರಾಜ್ ಪಜಿರೋಡಿ, ಚಂಪಾವತಿ ಕರ್ಬಡ್ಕ ಆಯ್ಕೆಯಾದರು.

ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಕ್ತಿ ಕೇಂದ್ರ ಅಧ್ಯಕ್ಷ ವಿಶ್ವನಾಥ ಬಲ್ಯಾಯ, ನಿಕಟ ಪೂರ್ವ ಶಕ್ತಿ ಕೇಂದ್ರ ಅಧ್ಯಕ್ಷ ಶ್ಯಾಮ್ ಭಟ್ ಕೈಂದಾಡಿ, ಮಾಜಿ ಬೂತ್ ಅಧ್ಯಕ್ಷ ಕೃಷ್ಣ ಸಾಲ್ಯಾನ್, ಕಾರ್ಯದರ್ಶಿ ದೇವರಾಜ್ ಕಲ್ಕಾರ್, ಶಿವಪ್ರಸಾದ್ ಕೈಂದಾಡಿ, ಹೋನಪ್ಪ ಗೌಡ ಕೈಂದಾಡಿ, ಪಕ್ಷದ ಹಿರಿಯ ಕಾರ್ಯಕರ್ತ ಬಾಲಕೃಷ್ಣ ಪ್ರಭು ಕಲ್ಕಾರ್, ಲೋಹಿತ್ ಕಲ್ಕಾರ್, ಆನಂದ ಗೌಡ ಕಲ್ಕಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments