ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ

ಕಾಂಚನ ಸಮೂಹ ಸಂಸ್ಥೆಯ ಉಡುಪಿಯ ಕಡಿಯಾಳಿ ಶೋರೂಮ್‍ನಲ್ಲಿ ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಉಡುಪಿಯ ಕಡಿಯಾಳಿ ಕಾಂಚನ ಸಮೂಹ ಸಂಸ್ಥೆಯ ಶೋರೂಂನಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಬಿಗ್‍ಬಾಸ್ ಸೀಸನ್ 9ರ ವಿಜೇತ, ನಟ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ ಅವರು ನೂತನ ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ದೇಶಿಯಾ ಬ್ರ್ಯಾಂಡ್ ಆದ ಏಥರ್ ಎಲೆಕ್ಟ್ರಿಕ್ ದ್ವಿಚಕ್ರವಾಹನವನ್ನು ಗ್ರಾಹಕರು ಹೆಚ್ಚು ಖರೀದಿಸುವ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಗೆ ಸಹಕರಿಸಬೇಕಾಗಿದೆ. ಕಾಂಚನ ಸಂಸ್ಥೆಯು ಉತ್ತಮ ಸೇವೆಯ ಮೂಲಕ ಈಗಾಗಲೇ ಜನಮನ್ನಣೆಗೆ ಪಾತ್ರವಾಗಿದೆ. ಬಿಡುಗಡೆಯ ದಿನದಂದೇ 200 ವಾಹನಗಳು ಮಾರಾಟವಾಗುತ್ತಿರುವುದು ದಾಖಲೆ. ಸಂಸ್ಥೆ ನೀಡುತ್ತಿರುವ ಸೇವೆಗೆ ಉತ್ತಮ ಉದಾಹರಣೆ ಎಂದು ಹೇಳಿದರು.

ಕಾಂಚನ ಗ್ರೂಪ್‍ನ ಎಂಡಿ ಪ್ರಸಾದ್ ರಾಜ್ ಕಾಂಚನ್ ಪ್ರಸ್ತಾವಿಕವಾಗಿ ಮಾತನಾಡಿ, ಏಥರ್ ಎಲೆಕ್ಟ್ರಿಕ್ ವಾಹನವು ದ್ವಿಚಕ್ರ ವಾಹದಲ್ಲಿಯೇ ಪ್ರಥಮ ಬಾರಿಗೆ ಅಳವಡಿಸಲಾದ ಆಟೋ ಹೋಲ್ಡ್, ಗೂಗಲ್ ಮ್ಯಾಪ್, 3.1 ಝೆನ್ ಸಾಫ್ಟರ್‍ವೇರ್, 5 ವರ್ಷ ವಾರಂಟಿಯುಳ್ಳ ಐಪಿ 67 ಪ್ರಮಾಣೀಕೃತ ಬ್ಯಾಟರಿ ಹೊಂದಿದೆ.. 6 ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ ಎಂದರು. ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಜಿಎಂ ರಾಮ ನಾಯ್ಕ್ ಕೆ. ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಾದ ಅಂಡಾರು ದೇವಿಪ್ರಸಾದ್ ಶೆಟ್ಟಿ ಶುಭಾಂಸನೆಗೈದರು.

ಎಎಸ್‍ಎಂ ಶ್ರೀತೇಜ್ ಅವರು ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ವೈಶಿಷ್ಠ್ಯಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಕಾಂಚನ ಗ್ರೂಫ್‍ನ ನಿರ್ದೇಶಕಿ ಸುಕನ್ಯಾ ಕಾಂಚನ್, ಕಾಂಚನ ಗ್ರೂಪ್‍ನ ಜಿಎಂ ಪ್ರತೀಕ್ ಕಾಮತ್, ವೀಕೆಂಡ್ ಆನ್ ವೀಲ್ಸ್‍ನ ಕ್ರಿಯೇಟರ್ ಗಿರೀಶ್ ಶೇಟ್ ಉಪಸ್ಥಿತರಿದ್ದರು. ಅಜಯ್ ಅವರು ನಿರೂಪಿಸಿ ವಂದಿಸಿದರು. ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವು ಕೇವಲ ಆಕರ್ಷಣೆಯಲ್ಲಿ ಮಾತ್ರವಲ್ಲದೆ ಅಧಿಕ ಮೈಲೇಜ್‍ನ್ನು ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್. ಹೋಮ್ ಸಾಕೆಟ್‍ಗಳಿಂದಲೂ ಇದನ್ನು ಚಾರ್ಜ್ ಮಾಡಬಹುದು. ಏಥರ್‍ನಲ್ಲಿ ಬೇಗ ಚಾರ್ಜ್ ಆಗುವಂತಹ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

Related Posts

Leave a Reply

Your email address will not be published.