ಕುಂಜತ್ತೂರು : ಪೊಲೀಸರಿಂದ ವಿದ್ಯಾರ್ಥಿಗಳಿಗೆ ಸಂರಕ್ಷಣೆಯ ಪಾಠ

ಮಂಜೇಶ್ವರ: ಕುಂಜತ್ತೂರು ಮಹಾಲಿಂಗೇಶ್ವರ ವಿದ್ಯಾನಿಕೇತನ ವಿದ್ಯಾರ್ಥಿಗಳು ಮಂಜೇಶ್ವರ ಪೆÇಲೀಸ್ ಠಾಣೆಗೆ ಬೇಟಿ ನೀಡಿ ಎಸ್‍ಐ ಸುಮೇಶ್ ಹಾಗೂ ಸಜಿಮನ್ ರವರೊಂದಿಗೆ ಸ್ವಯಂ ರಕ್ಷಣೆ ಕುರಿತಂತೆ ಪಾಠ ಕಲಿತರು. ವಿದ್ಯಾರ್ಥಿಗಳ ಪ್ರತಿಯೊಂದು ಪ್ರಶ್ನೆಗಳಿಗೆ ತಮ್ಮ ಅನುಭವದ ಮೂಲಕ ಉತ್ತರವನ್ನು ನೀಡಿದ ಠಾಣೆ ಎಸ್.ಐ ಸುಮೇಶ್ ಹಾಗೂ ಸಜಿಮನ್ , ವಿದ್ಯಾರ್ಥಿನೀಯರ ಮೇಲೆ ಅತ್ಯಾಚಾರ,ಬಲತ್ಕಾರಗಳು ಸಮಾಜದಲ್ಲಿ ನಡೆಯುತ್ತಿರುವ ಅನೇಕ ಉದಾಹರಣೆಗಳಿದ್ದು ಇವುಗಳನ್ನು ತಡೆಯಲು ನಮ್ಮ ಶಸ್ರ್ರಗಳಿಗಿಂತಲೂ ಆತ್ಮವಿಶ್ವಾಸ ಹಾಗೂ ಧೈರ್ಯ ಇರಬೇಕಾದುದು ಮುಖ್ಯ ಎಂದು ಎಂದು ಹೇಳಿದರು.

ಠಾಣೆಯ ಕೆಲಸ ಕಾರ್ಯಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳಿಗೆ ಬಂದೂಕು ಕುರಿತಂತೆ ಸಂಪೂರ್ಣ ಮಾಹಿತಿ ನೀಡಿದರು. ತಾವು ಮಕ್ಕಳ ಸ್ನೇಹಿ, ಮಹೀಳಾ ಸ್ನೇಹಿಯಾಗಿದ್ದು ಯಾವುದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದಾಗಿ ಈ ಸಂದರ್ಭದಲ್ಲಿ ಅವರು ತಿಳಿಸಿದರು. ಈ ಸಂದರ್ಭ ಅಧ್ಯಾಪಕರುಗಳಾದ ಮೋಹಿನಿ ಮಾತಾಶ್ರೀ, ಮಲ್ಲಿಕಾ, ಪೂರ್ಣಿಮಾ, ಮಮತಾ, ಸಂಧ್ಯಾ ಹಾಗೂ ಶಾಲಾ ಸಿಬ್ಬಂಧಿ ಸಂಜೀವ ಶೆಟ್ಟಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.