ಒಂದೇ ಮಳೆಗೆ ಕೂಳೂರು ಹಳೆ ಸೇತುವೆಯಲ್ಲಿ ಟ್ರಾಫಿಕ್ ಜಾಮ್
ಮಂಗಳೂರಿನ ಕೂಳೂರು ಹಳೆ ಸೇತುವೆಯಲ್ಲಿ ಭಾರೀ ಗಾತ್ರದ ಹೊಂಡಗಳಲ್ಲಿ ಮಳೆ ನೀರು ನಿಂತು ವಾಹನ ಚಾಲಕರು ಪರದಾಡುವ ಜತೆಗೆ ಟ್ರಾಫಿಕ್ ಜಾಮ್ ಪರಿಸ್ಥಿತಿ ಉಂಟಾಗಿದೆ.
ಮೈಕ್ರೋ ಟೆಕ್ನಾಲಜಿ ಮೂಲಕ ದುರಸ್ತಿ ಮಾಡಲಾದ ಕೂಳೂರು ಹಳೇ ಸೇತುವೆಯ ಇಕ್ಕೆಲಗಳಲ್ಲಿ ಇದೀಗ ಹೊಂಡ ಬೀಳಲಾರಂಭಿಸಿದೆ.
ಡಾಮರು ತೇಪೆ ಹಾಕಿ ಒಂದೆರಡು ತಿಂಗಳು ಕಳೆಯುವುದರೊಳಗೆ ಒಂದೇ ಮಳೆಗೆ ಅಲ್ಲಲ್ಲಿ ಹೊಂಡ ಬಿದ್ದಿದ್ದು, ಸೋಮವಾರ ಮಳೆಯ ನಡುವೆ ಹೆದ್ದಾರಿ ಇಲಾಖೆ ತೇಪೆ ಹಾಕಲು ಮುಂದಾಗಿದ್ದು ಲಾಕ್ ಡೌನ್ ವಿನಾಯಿತಿ ಸಂದರ್ಭ ನೂರಾರು ವಾಹನಗಳು ಹೆದ್ದಾರಿ ಉದ್ದಕ್ಕೂ ಸಾಲುಗಟ್ಟಿ ನಿಲ್ಲಬೇಕಾಯಿತು. ಮಳೆ ನೀರು ತುಂಬಿ ಘನ ವಾಹನಗಳು ಸೇರಿದಂತೆ ಕಾರು, ದ್ವಿಚಕ್ರ ವಾಹನ ಸವಾರರು ಇಂದು ಬೆಳಗ್ಗೆ ಮಳೆಯ ನಡುವೆ ಪರದಾಡುವಂತಾಗಿದೆ.