ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ- 2021 : ಹಿರಿಯ ಹಿಮ್ಮೇಳನ ವಾದಕರಾದ ಮೋಹನ್ ಶೆಟ್ಟಿಗಾರ್ ಅವರಿಗೆ ಪ್ರಶಸ್ತಿ
ಕರಾವಳಿಯ ಹೆಮ್ಮೆಯ ಕಲೆಯಾಗಿರುವ ಯಕ್ಷಗಾನ ಕ್ಷೇತ್ರದ ತೆಂಕುತಿಟ್ಟಿನ ಹೆಸರಾಂತ ಹಿಮ್ಮೇಳ ವಾದಕರಾದ ಕಡಬ ನಾರಾಯಣ ಆಚಾರ್ಯರ ಸ್ಮರಣಾರ್ಥ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ- 2021ನ್ನು ಮಂಗಳೂರಿನ ಹಿರಿಯ ಹಿಮ್ಮೇಳನ ವಾದಕರಾದ ಮೋಹನ್ ಶೆಟ್ಟಿಗಾರ್ ಮಿಜಾರು ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಕಡಬ ಸ್ಮಾರಕ ಸಮಿತಿಯ ಬೆಳುವಾಯಿ ಸುಂದರ ಆಚಾರಿ ತಿಳಿಸಿದರು.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಅಕ್ಟೋಬರ್ 3ರ ಆದಿತ್ಯವಾರದಂದು ಮೂಡಬಿದರೆ ಕ್ಷೇತ್ರದ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಅಂಗಣದಲ್ಲಿ ಅಪರಾಹ್ನ 2ರಿಂದ ಪ್ರಶಸ್ತಿ ಪ್ರದಾನ ಹಾಗೂ ಹಿರಿಯ ಕಲಾವಿದರುಗಳಿಂದ ಶ್ರೀಮತಿ ಪರಿಣಯ ಎಂಬ ಯಕ್ಷಗಾನ ಪ್ರದರ್ಶನದೊಂದಿಗೆ ಕಾರ್ಯಕ್ರಮ ಜರುಗಲಿರುವುದು ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಗೌರವಾಧ್ಯಕ್ಷರಾದ ಜಿ.ಟಿ. ಆಚಾರ್ಯ, ಕೋಶಾಧಿಕಾರಿ ಡಿ. ಭಾಸ್ಕರ ಆಚಾರ್ಯ ಆಂಡಿಂಜೆ, ಕಾರ್ಯದರ್ಶಿ ಗಿರೀಶ್ ಕಾವೂರು ಉಪಸ್ಥಿತರಿದ್ದರು.