ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಯಿನಾಥ್ ಶೇಟ್ ದೈವಜ್ಞ ಬ್ರಾಹ್ಮಣ ಸಮಾಜ ಕುಂದಾಪುರ ವತಿಯಿಂದ ಸನ್ಮಾನ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಯಿನಾಥ ಶೇಟ್ ಅವರನ್ನು ದೈವಜ್ಞ ಬ್ರಾಹ್ಮಣ ಸಮಾಜ ಕುಂದಾಪುರ ವತಿಯಿಂದ ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಸ್ವಾತಿ ಜಿ ಶೇಟ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾತ್ವಿಕ್ ಕೋಟೇಶ್ವರ ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜ್ಯುವೆಲ್ ಅಸೋಸಿಯೇಷನ್ ಕುಂದಾಪುರ ಇದರ ಅಧ್ಯಕ್ಷರಾದ ಸತೀಶ್ ಶೇಟ್ ನಾಡ, ಅನುಗ್ರಹ ಜ್ಯುವೆಲರ್ಸ್ ಮಾಲೀಕರಾದ ಗೋಪಾಲಕೃಷ್ಣ ಶೇಟ್, ನವೀನ್ ಶೇಟ್, ಸಂತೋಷ್ ಶೇಟ್,ಸುನೀಲ್ ಶೇಟ್, ಮಹೇಶ್ ಶೇಟ್ ಉಪಸ್ಥಿತರಿದ್ದರು.