“ಯಾರಿಗೂ ಹೇಳ್ಬೇಡಿ” ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದಲ್ಲ : ಕೋಟ ಶ್ರೀನಿವಾಸ್ ಪೂಜಾರಿ
ಕುಂದಾಪುರ: ನಳಿನ್ ಕುಮಾರ್ ಕಟೀಲ್ ಒಬ್ಬ ಸೂಕ್ಷ್ಮ ಜೀವಿ. ಅವರದ್ದು ಎನ್ನಲಾದ ಧ್ವನಿ ಸುರುಳಿ ಅವರದ್ದಲ್ಲ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಅವರು ಕಾಳವಾರ ಪಂಚಾಯತ್ ನ ಕಾರ್ಯಕ್ರಮಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ನನಗೆ ಆ ಆಡಿಯೋದ ಮೇಲೆ ಸಂಶಯ ಇದೆ. ಅದರಲ್ಲಿ ಇರುವ ಧ್ವನಿ ಭಾಜಪ ದ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದಲ್ಲ. ಇದರ ವಿರುದ್ದ ಸೂಕ್ತ ತನಿಖೆ ನಡೆಸುವಂತೆ ಮುಖ್ಯಮಂತ್ರಿಯವರಿಗೆ ನಾನು ಆಗ್ರಹಿಸಿದ್ದೇನೆ.
ಈ ರೀತಿ ನಕಲಿ ಆಡಿಯೋ ಸೃಷ್ಟಿಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನುಡಿದರು.