ಯುಪಿಸಿಎಲ್ ನಿಂದ ಮತ್ತೆ ಪರಿಸರಕ್ಕೆ ಉಪ್ಪು ಮಿಶ್ರಿತ ರಾಸಾಯನಿಕ ನೀರು
ಕಾಪು ತಾಲೂಕಿನ ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಜನವಿರೋಧಿಯಾಗಿ ಕಾರ್ಯಚರಿಸುತ್ತಿರುವ ಯುಪಿಸಿಎಲ್ ಕಂಪನಿಯಿಂದ ಸ್ಥಳೀಯರಿಗೆ ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಉದ್ಬವವಾಗುತ್ತಿದೆ.
ಇದೀಗ ಮತ್ತೆ ಇಂದು ಸಮದ್ರಕ್ಕೆ ಸಂಪರ್ಕ ಕಲ್ಪಿಸಲಾಗಿದ್ದ ಪೈಪ್ ಲೈನ್ ನ ಗೇಟ್ ವಾಲ್ ಭಾಗದಲ್ಲಿ ಉಪ್ಪು ಮಿಶ್ರಿತ ರಾಸಾಯನಿಕ ನೀರು ಹೊರ ಚುಮ್ಮಿದ್ದು, ಆ ನೀರು ತೆಂಕ ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಕುಡಿಯುವ ನೀರಿನ ಬಾವಿ ಪ್ರದೇಶದಲ್ಲಿ ಇಂಗಿದ ಪರಿಣಾಮ ಈ ಭಾಗದ ಜನರಿಗೆ ಕುಡಿಯು ನೀರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ಯುಪಿಸಿಎಲ್ ಕಂಪನಿ ನೀಡುತ್ತಿರುವ ಸಮಸ್ಯೆಯಿಂದ ಸ್ಥಳೀಯ ಮಂದಿ ನಿರಂತರ ಸಂತ್ರಸ್ಥರಾಗುತ್ತಿದ್ದಾರೆ.