HomeFresh Newsಕೊಂಚಾಡಿ ರಸ್ತೆಯಲ್ಲಿ ಗಲೀಜು ನೀರು: ಪಾಲಿಕೆಯ ಶವ ನೇತು ಹಾಕಿ ಚಳುವಳಿ

ಕೊಂಚಾಡಿ ರಸ್ತೆಯಲ್ಲಿ ಗಲೀಜು ನೀರು: ಪಾಲಿಕೆಯ ಶವ ನೇತು ಹಾಕಿ ಚಳುವಳಿ

ಕೊಂಚಾಡಿಯ ಕೆನರಾ ಅಪಾರ್ಟ್ಮೆಂಟ್ ನವರು ಸಾರ್ವಜನಿಕ ರಸ್ತೆಗೆ ಮಲ ಮಿಶ್ರಿತ ಗಲೀಜು ನೀರನ್ನು ಬಿಡುತ್ತಿರುವ ಬಗ್ಗೆ ಹಲವಾರು ಬಾರಿ ದೂರು, ಮನವಿಗಳನ್ನು ನೀಡಿದರು, ಕ್ರಮ ಕೈಗೊಳ್ಳದ ನಗರ ಪಾಲಿಕೆಯ ವಿರುದ್ಧ ಪ್ರತಿಭಟನಾ ಕಾರ್ಯಕ್ರಮ ನಡೆಸಿದ ನಂತರವೂ ಮತ್ತದೇ ರೀತಿಯಲ್ಲಿ ಗಲೀಜು ನೀರು ಸಾರ್ವಜನಿಕ ರಸ್ತೆಗೆ ಬಿಡುತ್ತಿರುವ ವಿರುದ್ಧ ಇಲ್ಲಿನ ಜನಪರ ಸಂಘಟನೆಗಳು ನಗರ ಪಾಲಿಕೆಯವರೇ ಗಲೀಜು ನೀರನ್ನು ಸಾರ್ವಜನಿಕ ರಸ್ತೆಗೆ ಬಿಡಲು ಸಹಕರಿಸುತ್ತಿದ್ದಾರೆಂದು ಆರೋಪಿಸಿ ಬ್ಯಾನರ್ ಅನ್ನು ಹಾಕಲಾಯಿತು.


ಚಳುವಳಿಯ ಮುಂದುವರಿದ ಭಾಗವಾಗಿ ನಗರಾಡಳಿತ, ಜಿಲ್ಲಾಡಳಿತ, ಜನಪ್ರತಿನಿದಿಗಳಿಗೆ ನಿರಂತರ ಅಂಚೆ ಕಾರ್ಡ್ ನ ಮೂಲಕ ಇಲ್ಲಿನ “ಮಲ ಮಿಶ್ರಿತ ಗಲೀಜು”ಗಳನ್ನು ಬರೆದು ಹಾಕಲಾಯಿತು ಮತ್ತೆ ಈಗ ನಗರ ಪಾಲಿಕೆ ನಮ್ಮ ಕಷ್ಟ ಕೇಳದೆ ಸತ್ತು ಹೋಗಿದೆ ಎಂದು ನಗರ ಪಾಲಿಕೆ ಶವ ನೇತು ಹಾಕಿ ಪ್ರತಿಭಟನೆ ನಡೆಸಲಾಗಿದೆ.DYFI, CPIM,  , ದಲಿತ ಹಕ್ಕುಗಳ ಸಮಿತಿ, ಕಟ್ಟಡ ಕಾರ್ಮಿಕ ಸಂಘಟನೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments