5G ವಂಚಕರ ಬಗ್ಗೆ ಇರಲಿ ಎಚ್ಚರ : ಓಟಿಪಿ ನೀಡಿ ವಂಚನೆಗೊಳ್ಳಬೇಡಿ

5G ಅಥವಾ 5 ನೇ ಜನರೇಷನ್ನಿನ ಮೊಬೈಲ್ ನೆಟ್ ವರ್ಕ್ ಕೇವಲ ಇಂಟರ್ನೆಟ್ ಸ್ಪೀಡ್ ನ್ನು ಮಾತ್ರವೇ ಅಪ್ ಗ್ರೇಡ್ ಮಾಡುವುದಿಲ್ಲ ಬದಲಾಗಿ ಇದು ಮುಂದಿನ ಜನರೇಷನ್ನಿನ ಟೆಕ್ನಾಲಜಿಯನ್ನು ಡ್ರೈವ್ ಮಾಡುತ್ತದೆ. ಇದೀಗ 5G ಯಲ್ಲಿ ಕೆಲ ಸೈಬರ್ ಹ್ಯಾಕರ್’ಗಳು ಕೂಡ ಹೊಸ ರೀತಿಯ ವಂಚನೆಗೆ ಮುಂದಾಗಿದ್ದಾರೆ. ಈ ಹೊಸ ರೂಪದ ಸೈಬರ್ ಕ್ರೈಮ್ಗೆ ಬಲಿಯಾಗಬೇಡಿ ಎಂದು ತಜ್ಞರು ಎಚ್ಚರಿಸಿದ್ದಾರೆ.
ನಿಮ್ಮ ಮೊಬೈಲ್‌ನಲ್ಲಿರುವ 4G ಸಿಸ್ಟಮ್’ನ್ನ 5ಉಗೆ ಅಪ್‌ಗ್ರೇಡ್ ಮಾಡಬೇಕೆಂದು ನಿಮ್ಮ ಮೊಬೈಲ್‌ನಲ್ಲಿ ಸಂದೇಶ ಅಥವಾ ಕರೆಯನ್ನ ನೀವು ಪಡೆಯಬಹುದು. ವಂಚಕರು ಅದಕ್ಕಾಗಿ ಕೊಟ್ಟಿರುವ ಲಿಂಕ್ ಮತ್ತು ಮುಂದಿನ ಪ್ರಕ್ರಿಯೆಯನ್ನ ಪೂರ್ಣಗೊಳಿಸಿ. ನಂತ್ರ ಒದಗಿಸಿದ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಿ ಎನ್ನುತ್ತಾರೆ. ನೀವು ಕೂಡ ಅದನ್ನ ಅನುಮಾನಿಸದೇ ಪ್ರಕ್ರಿಯೆ ಪ್ರಾರಂಭಿಸುತ್ತೀರಿ. ಆದ್ರೆ, ಕೊನೆಯಲ್ಲಿ ನಿಮಗದು ವಂಚನೆ ಅನ್ನೋದು ಅರಿವಿಗೆ ಬರುತ್ತೆ.
ಹೌದು, ಅವರು ನೀಡಿರುವ ಲಿಂಕ್ ಮೇಲೆ ದರೆ ಆ ಲಿಂಕ್’ನಿಂದ ನಿಮ್ಮ ಮೊಬೈಲ್’ಗೆ ಹ್ಯಾಕಿಂಗ್ ವೈರಸ್ ಸೇರಿಕೊಂಡು ನಿಮ್ಮ ಫೋನ್ ಹ್ಯಾಕ್ ಆಗುತ್ತದೆ. ತದನಂತರ ನಿಮ್ಮ ಮೊಬೈಲ್‌ನಿಂದ ಎಲ್ಲಾ ಡೇಟಾವನ್ನ (ಫೋಟೋಗಳು / ಚಾಟಿಂಗ್ / ಬ್ಯಾಂಕಿಂಗ್ ವಿವರಗಳು) ಕದಿಯಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಹಣವನ್ನ ಆರ್ಥಿಕ ಅಥವಾ ಭಾವನಾತ್ಮಕ ಬ್ಲ್ಯಾಕ್‌ಮೇಲ್ ಮೂಲಕ ಸುಲಿಗೆ ಮಾಡಲಾಗುತ್ತದೆ. ಅಥವಾ ನೀವು ಅವರ ಪ್ರಕ್ರಿಯೆಯಲ್ಲಿ ಆ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದರೆ ಈಗ ನೀವು OTP ಅನ್ನು ಪಡೆಯುತ್ತೀರಿ ಅದು ನಮಗೆ ತಿಳಿಸಿ ಎಂದು ಕೇಳುತ್ತಾರೆ. ನೀವು ಅದನ್ನು ಅವರಿಗೆ ನೀಡುತ್ತೀರಿ ಮತ್ತು ಮುಂದಿನ ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುತ್ತೆ. ಯಾಕಂದ್ರೆ, ನಿಮ್ಮ ಫೋನ್ ನಿಮ್ಮ ಬ್ಯಾಂಕ್ ಖಾತೆಗೂ ಲಿಂಕ್ ಆಗಿರುತ್ತೆ. ಆದ್ದರಿಂದ ದಯವಿಟ್ಟು ಅಂತಹ ಯಾವುದೇ ಕರೆಗಳು / ಸಂದೇಶಗಳಿಗೆ ಉತ್ತರಿಸಬೇಡಿ.
ಮುನ್ನೆಚ್ಚರಿಕೆ ಕ್ರಮ..!
ಈ ಕಾಟ ತಪ್ಪಿಸಲು ಸರಳ ಪರಿಹಾರವಿದೆ. ನಿಮ್ಮ ಸಂಖ್ಯೆ (SIM ಕಾರ್ಡ್) ಸೇರಿರುವ ಕಂಪನಿ. ಆ ಸೇವಾ ಪೂರೈಕೆದಾರ ಕಂಪನಿಯ ನಿಮ್ಮ ಹತ್ತಿರದ ಶೋರೂಂಗೆ ನೀವೇ ಭೇಟಿ ನೀಡಿ. ಮತ್ತು ಅವರಿಂದ ನಿಮ್ಮ ಸಿಮ್ ಅನ್ನು ಅಪ್‌ಗ್ರೇಡ್ ಮಾಡಿ. ಇದು ಅತ್ಯಂತ ಸುರಕ್ಷಿತವಾಗಿದೆ. ಯಾರೋ ಹೇಳಿದಂತೆ, ಆನ್‌ಲೈನ್‌ನಲ್ಲಿ ಅಪ್‌ಗ್ರೇಡ್ ಮಾಡುವುದು ಅಪಾಯಕಾರಿ. ನೀವು ಜಾಗರೂಕರಾಗಿರಿ ಆದರೆ ಅದೇ ಸಂದೇಶವನ್ನು ನಿಮ್ಮ ಕುಟುಂಬ/ಸ್ನೇಹಿತರಿಗೂ ತಿಳಿಸಿ ಎಂದು ಸೈಬರ್ ಪೊಲೀಸರು ನಾಗರಿಕರಿಗೆ ಮನವಿ ಮಾಡಿದ್ದಾರೆ.