HomeFresh Newsಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಮಂಗಳೂರು ಇದರ 2026-2029ನೇ ಸಾಲಿನ ಮಹಿಳಾ ಘಟಕ ಹಾಗೂ ಯುವ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಂಘದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಅವರ ಅಧ್ಯಕ್ಷತೆಯಲ್ಲಿ, ಪದಾಧಿಕಾರಿಗಳು ಹಾಗೂ ನಿರ್ದೇಶಕರ ಸಮ್ಮುಖದಲ್ಲಿ ನಡೆಯಿತು.
ಮಹಿಳಾ ಘಟಕದ ಅಧ್ಯಕ್ಷರಾಗಿ ಸಾರಿಕಾ ಸುರೇಶ್, ಕಾರ್ಯದರ್ಶಿಯಾಗಿ ಡಿ.ಆರ್. ಸುನಂದ ದಂಬೆಕೋಡಿ, ಉಪಾಧ್ಯಕ್ಷರಾಗಿ ಜಾನಕಿ ಬಾಲಕೃಷ್ಣ, ಜೊತೆ ಕಾರ್ಯದರ್ಶಿಯಾಗಿ ಅಕ್ಷತಾ ನಾರಾಯಣ ಪ್ರಸಾದ್ ಹಾಗೂ ಖಜಾಂಚಿಯಾಗಿ ಸೌಮ್ಯ ಸುರೇಶ್ ಆಯ್ಕೆಯಾದರು.
ಸಮಿತಿಯ ಸದಸ್ಯರಾಗಿ ಜಯಶ್ರೀ ಪಿ., ಅನಿತಾ ಶಿವಕುಮಾರ್, ಹೇಮಲತಾ ಸಿ., ವಾಣಿ ನವೀನ್, ಜಯಲಕ್ಷ್ಮಿ ಶಕ್ತಿನಗರ, ಸತ್ಯಲತಾ ಚಂದ್ರಹಾಸ್, ಚೆಲುವಮ್ಮ, ಮಾನಸ ಹರಿಪ್ರಸಾದ್, ಶೈಲ ಕೋಡಿಕೆರೆ ಹಾಗೂ ರತ್ನಾವತಿ ಆಯ್ಕೆಯಾಗಿದ್ದಾರೆ.
ಯುವ ಘಟಕದ ಅಧ್ಯಕ್ಷರಾಗಿ ರಕ್ಷಿತ್ ಪುತ್ತಿಲ, ಕಾರ್ಯದರ್ಶಿಯಾಗಿ ಚೇತನ್ ಕೊಕ್ಕಡ, ಉಪಾಧ್ಯಕ್ಷರಾಗಿ ದಿನೇಂದ್ರ ಉಳುವಾರು, ಜೊತೆ ಕಾರ್ಯದರ್ಶಿಯಾಗಿ ಸುನಿಲ್ ಕೆರ್ನಡ್ಕ ಹಾಗೂ ಖಜಾಂಚಿಯಾಗಿ ಮಹೇಶ್ ಮೋಂಟಡ್ಕ ಆಯ್ಕೆಯಾಗಿದ್ದಾರೆ.
ಯುವ ಘಟಕದ ಸದಸ್ಯರಾಗಿ ನಾಗೇಶ್ ಕೆ. ಗೌಡ, ಮಂಜುಪ್ರಸಾದ್ ಕುರುಂಜಿ, ಪ್ರಜ್ಞಾ ಸುನಿಲ್, ಕಿರಣ್ ಕೊಡಂಗೆ, ಮಹೇಶ್ ನಡುತೋಟ, ಕಿರಣ್ ಹೊಸಳಿಕೆ, ಯತೀಶ್ ಕಜ್ಜೋಡಿ, ಗಣೇಶ್ ಕಲಾಯಿ, ಪ್ರಕಾಶ್ ರಾಜ್, ಡಾ. ಸಚಿನ್ ನಡ್ಕ, ಹರ್ಷಿಣಿ ಶ್ರೀಕಾಂತ್, ವೇಣು, ಸುಜಿತ್ ಕೆ.ಎಸ್., ಹರ್ಷ ದುಗ್ಗಲ, ಸುಕೇಶ್ ಪಿ. ಹಾಗೂ ಹರ್ಷರಾಜ್ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ನಿರ್ದೇಶಕರು ಅಭಿನಂದಿಸಿ ಶುಭ ಹಾರೈಸಿದರು.

sudha add new -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments