HomeFresh Newsಪೊಲೀಸ್ ಕಾನ್ಸ್ ಸ್ಟೇಬಲ್ ಹುದ್ದೆಗೆ ಹರಿಪ್ರಸಾದ್ ಕೆ. ನೇಮಕ

ಪೊಲೀಸ್ ಕಾನ್ಸ್ ಸ್ಟೇಬಲ್ ಹುದ್ದೆಗೆ ಹರಿಪ್ರಸಾದ್ ಕೆ. ನೇಮಕ

ಭಾರತೀಯ ಸೇನೆಯಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯಾದ ಬಳಿಕ ಮಂಗಳೂರು ಘಟಕದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಪುತ್ತೂರಿನ ಪೆರ್ಲಂಪಾಡಿಯ ಹರಿಪ್ರಸಾದ್ ಕೆ. ಅವರು ನೇಮಕಗೊಂಡಿದ್ದಾರೆ.hariprasad k

ಹರಿಪ್ರಸಾದ್ ಕೆ. ಅವರು ಭಾರತೀಯ ಸೇನೆಯಲ್ಲಿ ಸರಿ ಸುಮಾರು 17 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದು, ತಮ್ಮ‌ ಸೇವಾ ಅವಧಿಯಲ್ಲಿ ದೇಶದ ಪಂಜಾಬ್, ಅಸ್ಸಾಂ, ಜಮ್ಮು ಕಾಶ್ಮೀರ, ರಾಜಸ್ತಾನ, ವಡೋದರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಇದೀಗ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ನೇಮಕಗೊಂಡು ಬೆಂಗಳೂರಿನಲ್ಲಿ ಬುನಾಧಿ ತರಬೇತಿಯನ್ನು ಪಡೆದುಕೊಂಡು ಮಂಗಳೂರಿನ ಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಪೆರ್ಲಂಪಾಡಿಯ ಬೆಳ್ಯಪ್ಪ ಗೌಡ ಮತ್ತು ತಾರಾವತಿ ದಂಪತಿಗಳ ಪುತ್ರರಾಗಿದ್ದಾರೆ. ಇವರ ಪತ್ನಿ ಶ್ರೀಮತಿ ವನಿತಾ ಅವರು ಮರ್ದಾಳದ ಗುಡ್ ಶೆಪರ್ಡ್ ಇಂಗ್ಲಿಷ್ ಮೀಡಿಯಮ್ ಹೈಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments