HomeFresh Newsಬಲಿಪತೋಟ ಶ್ರೀ ದೈವರಾಜ ಬಬ್ಬು ಸ್ವಾಮಿ ದೈವಸ್ಥಾನ : ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ -...

ಬಲಿಪತೋಟ ಶ್ರೀ ದೈವರಾಜ ಬಬ್ಬು ಸ್ವಾಮಿ ದೈವಸ್ಥಾನ : ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ – ಬಹುಮಾನ ವಿತರಣಾ ಕಾರ್ಯಕ್ರಮ

ಶ್ರೀ ದೈವರಾಜ ಬಬ್ಬುಸ್ವಾಮಿ ಶ್ರೀ ಕಲ್ಪವೇದಿಕೆ ಬಲಿಪತೋಟ ಇದರ ವತಿಯಿಂದ 4ನೇ ವರ್ಷದ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಭಾರತೀನಗರದ ಬಲಿಪತೋಟ ಶ್ರೀ ದೈವರಾಜ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ನಡೆಯಿತು. ಕೊಡಿಯಾಲ್‍ಗುತ್ತು ಪ್ರಸಾದ್ ಅಸೋಸಿಯೇಟ್ಸ್‍ನ ಪ್ರಸಾದ್ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಲಿಪತೋಟ ಶ್ರೀ ದೈವರಾಜ ಬಬ್ಬುಸ್ವಾಮಿ ಕ್ಷೇತ್ರದ ಅಧ್ಯಕ್ಷರಾದ ಲೋಕನಾಥ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕೊಡಿಯಾಲ್‍ಗುತ್ತು ಪ್ರಸಾದ್ ಅಸೋಸಿಯೇಟ್ಸ್‍ನ ಪ್ರಸಾದ್ ಶೆಟ್ಟಿ, ಬಿಜೈ ಕಾಪಿಕಾಡ್ ಶ್ರೀ ವಿನಾಯಕ ಫ್ರೆಂಡ್ಸ್ ಕ್ಲಬ್ ಕೊಟ್ಟಾರ ಕ್ರಾಸ್ ಅಧ್ಯಕ್ಷರಾದ ಜಯಚಂದ್ರ, ಅಂಕಿತ್ ಎಸ್ ಕುಮಾರ್ ನಿಟ್ಟೆ ಅವರನ್ನು ಶ್ರೀ ದೈವರಾಜ ಬಬ್ಬುಸ್ವಾಮಿ ಶ್ರೀ ಕಲ್ಪವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶ್ರೀ ಡೆಕೊರೇಟರ್‍ನ ಅಶೋಕ್ ಕುಮಾರ್ ಕೊಡಕ್ಕಲ್, ಬಿಜೈನ ಚಾರ್ಟೆಡ್ ಅಕೌಂಟೆಂಟ್ ಸತೀಶ್ ಶೆಟ್ಟಿ, ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನ ಉಪನ್ಯಾಸಕರಾದ ವಾದಿರಾಜ ಕಲ್ಲೂರಾಯ, ಮಂಗಳೂರು ನಗರ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಬಿ ಸಾಲ್ಯಾನ್, , ಶ್ರೀ ಗೋಕರ್ಣನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಘುರಾಜ್ ಕದ್ರಿ, ನಿಟ್ಟೆಯ ಕೌನ್ಸಿಲರ್ ಅಂಕಿತ್ ಎಸ್ ಕುಮಾರ್, ಲಕ್ಷ್ಮಣ್ ಬಲಿಪತೋಟ, ರಮ್ಯ, ವಸಂತಿ ದೇವೇಂದ್ರ, ದೈವಸ್ಥಾನದ ಪ್ರಧಾನ ಅರ್ಚಕರು, ಗುರಿಕಾರರು ಹಾಗೂ ಕಲ್ಪವೇದಿಕೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕರಾದ ಲಿಖಿತಾ ಧನಂಜಯ್ ಸ್ವಾಗತಿಸಿ, ಸೌಮ್ಯ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments