ನೋಡುಗರ ಕಣ್ ಮನಸೆಳೆದ ಮೀಟರ್ ನುಗ್ಗೆಕಾಯಿ..!!

ಬಂಟ್ವಾಳ : ನುಗ್ಗೆಕಾಯಿ ಎಂಬ ಕ್ಷಣ ನಮಗೆ ಅದರ ಔಷಧೀಯ ಗುಣಗಳು ನೆನಪಿಗೆ ಬರುತ್ತದೆ ಹಾಗೆ ನುಗ್ಗೆ ಸೊಪ್ಪಿನಲ್ಲಿ ರಕ್ತಹೀನತೆಗೆ ಒಳ್ಳೆಯ ಔಷಧಿ ಕ್ಯಾಲ್ಸಿಯಂ ವಿಟಮಿನ್ ಎ ವಿಟಮಿನ್ ಇ ಪೊಟ್ಯಾಷಿಯಂ ಲೈಂಗಿಕ ಕಾಯಿಲೆಗಳಿಗೆ ನುಗ್ಗೇಕಾಯಿ ರಾಮಬಾಣ ನುಗ್ಗೆಕಾಯಿಯನ್ನು ತಿನ್ನುವುದರಿಂದ

ಸಿಡುಬು ಬರುವುದಿಲ್ಲ ಮೂಳೆಗಳ ಬಲ ಹೆಚ್ಚುತ್ತದೆ ಲೈಂಗಿಕ ಶಕ್ತಿ ಹೆಚ್ಚುತ್ತದೆ ಮದುಮೇಹಿಗಳಿಗೆ ಉತ್ತಮ
ಚೋಟುದ್ದ ವಿದ್ದ ನುಗ್ಗೆಕಾಯಿ ಫಿಟುದ್ದ ಆಯಿತು ಹೈಬ್ರಿಡ್ ಬಂತು ಆದರೆ ಇತ್ತೀಚೆಗೆ ಮಾರುದ್ದದ ಚಿಕ್ಕ ಚಿಕ್ಕ ಗಿಡಗಳಲ್ಲಿ ಮೀಟರ್ ನುಗ್ಗೆಕಾಯಿ ಗಳು ಬಂಟ್ವಾಳ ತಾಲೂಕಿನ ಮುಡಿಪು ಸುಬ್ರಹ್ಮಣ್ಯ ಭಟ್ಟರ ಹಿತ್ತಲಲ್ಲಿ ಬೆಳೆದ ಮೀಟರ್ ನುಗ್ಗೆಕಾಯಿ ನೋಡುಗರ ಕಣ್ತುಂಬಿ ಕಣ್ ಮನಸೆಳೆಯಿತು ಕ್ಯಾಮರಾ ಕಣ್ಣಲ್ಲಿ ಸೆರೆಯಾಯಿತು.

ಪ್ರಾರಂಭದಲ್ಲಿ ಮೀಟರ್ ಅಲಸಂಡೆ ಬಂತು ನಾವು ಚಿಕ್ಕದಿರುವಾಗ ತರಕಾರಿಗಳ ಬಗ್ಗೆ ತೊಂಡೆಕಾಯಿ ಬೆಂಡೆಕಾಯಿ ತೋಟದಲ್ಲಿದೆ ಎಂದು ಹಾಡಿದ್ದೇನು ಪಡುವಾಲಕಾಯಿ ಮಾತ್ರ ಇಷ್ಟುದ್ದ ಎಂದು ಡ್ಯಾನ್ಸ್ ಮಾಡುತ್ತಾ ಹೇಳಿದ್ದೇವೆ ಆದರೆ ಇತ್ತೀಚೆಗೆ ಹೀರೆಕಾಯಿ ಸೋರೆಕಾಯಿ ಮುಳ್ಳು ಸೌತೆ ಹಾಗಲಕಾಯಿ ಎಲ್ಲಾ ಉದ್ದುದ್ದ ಬೆಳೆಯುತ್ತದೆ.

ಬರಹ: ಕುಮಾರ್ ಪೆರ್ನಾಜೆ ಪುತ್ತೂರು

Related Posts

Leave a Reply

Your email address will not be published.