ಕಾರ್ಕಳ: ಗಾಂಧಿ ಸ್ಮೃತಿ ಮತ್ತು ನವ ಜೀವನ ಸಮಿತಿ ಸದಸ್ಯರ ಸಮಾವೇಶ
ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಗಾಂಧಿ ಸ್ಮೃತಿ ಮತ್ತು ನವ ಜೀವನ ಸಮಿತಿ ಸದಸ್ಯರ ಸಮಾವೇಶವು ಕಾರ್ಕಳದ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮಾಜಿ ಸಚಿವ ಅಭಯ ಚಂದ್ರ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅಭಯಚಂದ್ರ ಜೈನ್ ಅವರು, ನಾವಿಂದು ಗಾಂಧಿ ಜಯಂತಿಯನ್ನು ಬಹು ವಿಜೃಂಭಣೆಯಿಂದ ಆಚರಿಸಿದ್ದೇವೆ. ಅದೇ ರೀತಿ ಮಹಾತ್ಮ ಗಾಂಧಿಯವರು ಭಾರತವನ್ನು ಬ್ರಿಟಿಷರ ಕೈಯಿಂದ ಮುಕ್ತಗೊಳಿಸಲು ಅವರ ಚಳುವಳಿ ಬಲಿದಾನವನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬೇಕು ಎಂದರು.
ವೇದಿಕೆಯಲ್ಲಿ ಅಧ್ಯಕ್ಷರಾದ ಉದಯಕುಮಾರ್ ಹೆಗಡೆ, ಸಂಪತ್ ಸಾಮ್ರಾಜ್ಯ, ಸುಭಾಷ್ ಚಂದ್ರ ಚೌಟ, ನೀರೆ ಕೃಷ್ಣಶೆಟ್ಟಿ, ಬಾಹುಬಲಿ ಪ್ರಸಾದ್, ಕಮಲಾಕ್ಷ ನಾಯಕ್, ಪುರಸಭಾ ಅಧ್ಯಕ್ಷ ರೂಪ ಶೆಟ್ಟಿ, ತ್ರಿವಿಕ್ರಮಕಿಣಿ ಉಪಸ್ಥಿತರಿದ್ದರು.