ಆಪ್ ರಾಜ್ಯ, ಜಿಲ್ಲಾ ಸಮಿತಿ ಬರ್ಕಾಸ್ತು

ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಘಟಕದ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಯವರು, ಕರ್ನಾಟಕ ರಾಜ್ಯ, ಜಿಲ್ಲೆಗಳಲ್ಲಿನ ಎಲ್ಲಾ ಪದಾಧಿಕಾರಿಗಳು, ಘಟಕಗಳನ್ನು ಅನ್ವಯಿಸುವಂತೆ ವಿಸರ್ಜಿಸಿರುತ್ತಾರೆ. ಎಲ್ಲಾ ವಿಧಾನಸಭಾ ಅಭ್ಯರ್ಥಿ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಪೂರ್ಣಪ್ರಮಾಣದಲ್ಲಿ ಸಕ್ರಿಯವಾಗಿ ಪಕ್ಷದ ನಾಯಕರು, ಕಾರ್ಯಕರ್ತರ ಸಮನ್ಚಯದಲ್ಲಿ ಪಕ್ಷದ ಪ್ರಚಾರ ಅಭಿಯಾನದಲ್ಲಿ ಭಾಗವಹಿಸುತ್ತಾ, ಶೀಘ್ರದಲ್ಲೇ ಹೊಸದಾಗಿ, ರಾಜ್ಯ ಚುನಾವಣಾ ಉಸ್ತುವಾರಿ ರಚಿಸುವ ಪಕ್ಷದ ಪದಾಧಿಕಾರಿಗಳ ತಂಡದೊಂದಿಗೆ ಸಂಘಟಿತವಾಗಿ ಕಾರ್ಯನಿರ್ವಾಹಿಸಲು ಸಹಕಾರಿಯಾಗಿದೆ.
