ಬೇಡಿಕೆ ಈಡೇರಿಸುವಂತೆ ಪೌರ ಕಾರ್ಮಿಕರ ಮುಷ್ಕರ : ಪೌರ ಕಾರ್ಮಿರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ ಎಎಪಿ

ಕಳೆದ ನಾಲ್ಕು ದಿನಗಳಿಂದ ಮಳೆ ಗಾಳಿ ಅನ್ನದೆ ಮುಷ್ಕರ ನಿರತ ಪೌರ ಕಾರ್ಮಿಕರನ್ನು ಭೇಟಿಯಾಗಿ ಸಾಂತ್ವಾನ ಹೇಳುವ ಕೆಲಸವನ್ನು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ಕಾಮತ್ ಅವರ ತಂಡ ಇಂದು ಮಾಡಿತು. “ನಗರವನ್ನು ಸ್ವಚ್ಚವಾಗಿ ಇಡುವಲ್ಲಿ ಪೌರ ಕಾರ್ಮಿಕರ ಪಾಲು ಅತಿ ದೊಡ್ಡದು. ಪೌರ ಕಾರ್ಮಿಕರನ್ನು ಗೌರವಯುತವಾಗಿ ಕಾಣುವುದು ನಮ್ಮೆಲ್ಲರ ಕರ್ತವ್ಯ. ಹಾಗಿರುವಾಗ ಯಾವುದೇ ಚುನಾಯಿತ ಪ್ರತಿನಿಧಿಗಳು ಮುಷ್ಕರ ನಿರತ ಪೌರ ಕಾರ್ಮಿಕರನ್ನು ಭೇಟಿಯಾಗಿ ಸಾಂತ್ವನ ಹೇಳದೆ ಇರುವುದು ಉದ್ದಟತನದ ಪರಮಾವಧಿ ಆಗಿದೆ. ಮುಂದಿನ 48 ಗಂಟೆಗಳಲ್ಲಿ ಜನಪ್ರತಿನಿಧಿಗಳು ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ” ಎಂದು ಅವರು ಖಡಾಖಡಿತವಾಗಿ ಹೇಳಿದರು.

ಬಳಿಕ ಜಿಲ್ಲಾಧಿಕಾರಿಗಳ ಬಳಿ ತೆರಳಿದ ನಿಯೋಗ ಮುಖ್ಯಮಂತ್ರಿಗಳಿಗೆ ತಮ್ಮ ಮನವಿಯನ್ನು ಸಲ್ಲಿಸಿತು.
ವಲಯಾಧ್ಯಕ್ಷ ಜೆ. ಪಿ. ರಾವ್, ಸ್ಥಳೀಯ ಮುಖಂಡರಾದ ರಾಜೇಂದ್ರ ಕೆ. ಪಿ., ವೆಂಕಟೇಶ್ ಬಾಳಿಗಾ, ವಿನ್ನಿ ಪಿಂಟೊ, ಬೆನೆಟ್ ನವಿತ ಕ್ರಾಸ್ತಾ, ರೋನಿ ಕ್ರಾಸ್ತಾ, ನವೀನ್ ಡಿಸೋಜ, ಹಮೀದ್, ಅವ್ರೆನ್ ಡಿಸೋಜಾ, ರವಿ ಪ್ರಸಾದ್, ಡೆಸ್ಮಂಡ್ ಡಿಸೋಜಾ ಹಾಗೂ ಮತ್ತಿತರ ಕಾರ್ಯಕರ್ತರು ಉಸ್ಥಿತರಿದ್ದರು.