ನಟ ಅರ್ಜುನ್ ಕಾಪಿಕಾಡ್ ಹುಲಿ ಕುಣಿತಕ್ಕೆ ಮನಸೋತ ಪ್ರೇಕ್ಷಕರು
ಕೋಸ್ಟಲ್ ವುಡ್ ನಲ್ಲಿ ಅಬತರ ಮೂವಿ ಸಖತ್ ಸದ್ದು ಮಾಡ್ತಾ ಇದೆ.ಬೊಳ್ಳಿ ಮೂವೀಸ್ ಲಾಂಛನದಲ್ಲಿ ಅರ್ಜುನ್ ಕಾಪಿಕಾಡ್ ನಿರ್ದೇಶನದ `ಅಬತರ’ ತುಳು ಮೂವಿ ಕರಾವಳಿಯಾದ್ಯಂತ ಯಶಸ್ವಿ ಪ್ರದರ್ಶನ ಕಾಣ್ತಾ ಇದೆ.ಇದೀಗ ಅಬರತ ಬೈಕ್ ರಥಯಾತ್ರೆ ಮಂಗಳೂರಲ್ಲಿ ಸಂಭ್ರಮದಿಂದ ಜರುಗಿತ್ತು.
ನಗರದ ಫಾರಂ ನೆಕ್ಸಾ ಮಾಲ್ ನಲ್ಲಿ ಅಬರತ ಬೈಕ್ ರಥಯಾತ್ರೆಗೆ ಚಾಲನೆ ಸಿಕ್ಕಿತ್ತು. ನಟರಾದ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್ ಅವರು ಅಧಿಕೃತವಾಗಿ ಚಾಲನೆ ನೀಡಿದ್ರು.
ನಗರದ ನೆಕ್ಸ ಮಾಲ್ ನಿಂದ ಎ.ವಿ. ಶೆಟ್ಟಿ ಸರ್ಕಲ್,ಹಂಪನಕಟ್ಟೆ, ಸಿಟಿ ಸೆಂಟರ್ ಮಾರ್ಗವಾಗಿ ಪಿವಿಎಸ್, ಬಲ್ಲಾಳ್ ಬಾಗ್ , ಲಾಲ್ ಭಾಗ್, ಕೆಎಸ್ ಆರ್ .ಸಿ.ಟಿ ತನಕ ಸಾಗಿ ಬಂದು,ನಗರದ ಭಾರತ್ ಮಾಲ್ ನಲ್ಲಿ ಸಮಾಪನಗೊಂಡಿತ್ತು. ತದ ಬಳಿಕ ಭಾರತ್ ಮಾಲ್ ನಲ್ಲಿ ತಾಸೆ, ಡೋಲಿನ ಲಯಕ್ಕೆ ಸಂಗೀತ ವಾದ್ಯಗಳಿಗೆ ಹುಲಿಯ ಹೆಜ್ಜೆ ಹಾಕುತ್ತಾ ಸಾರ್ವಜನಿಕರನ್ನು ಮೂವಿಯ ತಂಡದವರು ಮನ ರಂಜಿಸಿದರು.
ನಟ ಅರ್ಜುನ್ ಕಾಪಿಕಾಡ್ ಕೂಡ ಹೆಜ್ಜೆ ಹಾಕುತ್ತಾ , ಕುಣಿದು ಮನರಂಜಿಸಿದ್ರು, ಅರ್ಜುನ್ ಕಾಪಿಕಾಡ್ ಗೆ ಹಲವಾರು ಸಾಥ್ ನೀಡಿದರು.ಈ ವೇಳೆ ನಿರ್ಮಾಪಕಿ ಶರ್ಮಿಳಾ ಕಾಪಿಕಾಡ್, ನಟ ಸಾಯಿಕೃಷ್ಣ, ಅನೂಪ್ ಸಾಗರ್,ಸಂದೀಪ್ ಶೆಟ್ಟಿ, ಲಕ್ಷ್ಮೀಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.