ದುಸ್ಥಿತಿಯಲ್ಲಿದೆ ಮಂಗಳೂರಿನ ನಂತೂರು ಬಸ್ ನಿಲ್ದಾಣ

ಸಾರ್ವಜನಿಕರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಸರಕಾರದ್ದು. ಆದರೆ ಈ ವಿಚಾರದಲ್ಲಿ ಆಡಳಿತದಲ್ಲಿರುವ ಮಂದಿ ತಮ್ಮ ಲಾಭವನ್ನೇ ನೋಡಿದಲ್ಲಿ ಅಂತಹ ಮೂಲಭೂತ ಸೌಲಭ್ಯಗಳು ಜನರಿಗೆ ಇದ್ದೂ ಇಲ್ಲದಂತಾಗುತ್ತದೆ.

ಇಂತಹುದೇ ಒಂದು ವ್ಯವಸ್ಥೆ ಮಂಗಳೂರಲ್ಲಿ ಕಾಣಬಹುದು. ಹೌದು. ಮಂಗಳೂರು ನಗರದ ನಂತೂರು ಸಮೀಪದಲ್ಲಿರುವ ಬಸ್ ನಿಲ್ದಾಣ ಈಗಲೋ, ಆಗಲೋ ಬೀಳುವ ಸ್ಥಿತಿಯಲ್ಲಿದೆ. ಮಂಗಳೂರು ಮಹಾನಗರ ಪಾಲಿಕೆಯ ಬಸ್ ನಿಲ್ದಾಣ ಹಲವಾರು ವರ್ಷಗಳಿಂದ ಬಸ್‍ನಿಲ್ದಾಣ ನಿರ್ವಹಣೆ ಇಲ್ಲದೇ ಕಂಬಗಳು ತುಕ್ಕು ಹಿಡಿದು ಇದೀಗ ಬೀಳುವ ಸ್ಥಿತಿಯಲ್ಲಿದೆ

. ಪಕ್ಕದಲ್ಲಿರುವ ಮರವೊಂದು ಬಸ್ ನಿಲ್ದಾಣಕ್ಕೆ ಬಿದ್ದಿರುವುದರಿಂದ ನಿಲ್ದಾಣ ಬೀಳುವ ಆತಂಕದಲ್ಲಿದೆ. ಹೀಗಾಗಿ ಪ್ರಯಾಣಿಕರು ಭಯದಲ್ಲಿಯೇ ಬಸ್‍ಗಾಗಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ.

Related Posts

Leave a Reply

Your email address will not be published.