ಮೆಕ್ಕೆಜೋಳದ ರಾಶಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ, ಲಕ್ಷಾಂತರ ರೂಪಾಯಿ ನಷ್ಟ

ಆಲೂರು ತಾಲೂಕು ಹಂಜಿಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ಯೋಗೇಶ್ ಎಂಬುವವರ ಜೋಳದ ರಾಶಿಗೆ ಅಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಜೋಳ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಆಲೂರು ಸಕಲೇಶಪುರ ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ, ಚಂಚಲ ಕುಮಾರಸ್ವಾಮಿ, ಜೆ ಡಿಎಸ್ ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷರಾದ ಕಣದಳ್ಳಿ ಮಂಜಣ್ಣ, ತಹಸೀಲ್ದಾರ್ ಕೆ.ಸಿ ಸೌಮ್ಯ. ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಎಚ್ ಕೆ ಕುಮಾರಸ್ವಾಮಿ ಅವರು ರೈತರು ಸಂಕಷ್ಟದಲ್ಲಿರುವಾಗ ಇಂತಹ ಘಟನೆಗಳು ನಡೆಯುವುದು ಬಹಳ ಬಹಳ ಗಂಭೀರವಾದ ವಿಷಯವಾಗಿದೆ ಆದ್ದರಿಂದ ಈ ಕೂಡಲೇ ನಾನು ಮುಖ್ಯಮಂತ್ರಿಗಳ ಬಳಿ ಮಾತನಾಡಿ ಸೂಕ್ತ ಪರಿಹಾರಕ್ಕೆ ಎಂದು ತಿಳಿಸಿದರು.ಇದನ್ನು ವಿಶೇಷ ಘಟನೆ ಎಂದು ಪರಿಗಣಿಸಿ ಸೂಕ್ತ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಆಲೂರು ತಾಲೂಕು ದಂಡಾಧಿಕಾರಿಗಳಾದ ಕೆ ಸಿ ಸೌಮ್ಯ ತಿಳಿಸಿದರು.

Related Posts

Leave a Reply

Your email address will not be published.