ಪ್ರೀತಿಯ ಸಾಕು ನಾಯಿಗೆ ಸೀಮಂತ
ಮಂಗಳೂರು:ಮಹಿಳೆಯರಿಗೆ ಸೀಮಂತ ಮಾಡುವುದು ಸಾಮಾನ್ಯ,ಆದರೆ ಇಲ್ಲೊಬ್ಬರು ಸಾಕು ನಾಯಿಗೆ ಸೀಮಂತದ ಮಾಡಿದ್ದಾರೆ. ಸೀಮಂತದ ಫೂಟೊ, ವೀಡಿಯೋ ವ್ಯೆರಲ್ ಆಗಿವೆ.
ಮಂಗಳೂರಿನ ಗುರುಪುರ ಕ್ಯೆಕಂಬದ ಮಂಜುಳ ಹಾಗೂ ಭಾಸ್ಕರ್ ಎಂಬುವವರ ಪುತ್ರಿ ಸುಶ್ಮಿತಾ ಸಾಲ್ಯಾನ್ ಎಂಬುವವರಿಗೆ ಸಾಕುಪ್ರಾಣಿ ಎಂದರೆ ತುಂಬಾ ಪ್ರೀತಿ, ತಮ್ಮ ಮನೆಯಲ್ಲಿ ಸಾಕಿದ್ದ, ಒಂದುವರೆ ವರುಷದ ಶಾಡೊ ಎಂಬ ಗರ್ಭಿನಿ ನಾಯಿಗೆ ಹಸಿರು ಬಳೆ ,ಹಸಿರು ಸೀರೆ , ಕುಂಕುಮ ಅರಸಿನ ಹಚ್ಚಿ, ಆರತಿ ಬೆಳಗಿ ಸೀಮಂತ ಮಾಡಿದ್ದಾರೆ. ಶ್ವಾನಕ್ಕೆ ಅಚ್ಚುಮೆಚ್ಚಿನ ಹಣ್ಣು-ಹಂಪಲು,ಐಸ್ ಕ್ರಿಂ, ಸಿಹಿತಿನಿಸು ಕೂಡ ನೀಡಿದ್ದಾರೆ. ಸೀಮಂತ ನಡೆಯುವ ವೇಳೆ ಶ್ವಾನ ಶಾಂತತೆಯಿಂದ ಕುಳಿತಿರುವ ದ್ರಶ್ಯ ವ್ಯೆರಲ್ ಆಗಿದೆ.