ಬಹರೇನ್ ದ್ವೀಪದಲ್ಲಿ “ಪಟ್ಲ ಸಂಭ್ರಮ”ಕ್ಕೆ ಕ್ಷಣಗಣನೆ ಆರಂಭ

ಬಹರೈನ್ : ಯಕ್ಷಧ್ರುವ ಪಟ್ಲಾ ಫೌಂಡೇಶನ್‍ನ ಬಹರೈನ್ ಹಾಗು ಸೌದಿ ಅರೇಬಿಯಾ ಘಟಕವು ದ್ವಿತೀಯ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು ತನ್ನ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ” ಶಶಿಪ್ರಭಾ ಪರಿಣಯ” ಎನ್ನುವ ಪ್ರಸಂಗವನ್ನು ಆಡಿತೋರಿಸಲಿದೆ. ಈ ಕಾರ್ಯಮದ ಪೂರ್ವಭಾವಿ ತಯಾರಿಯು ಭರದಿಂದ ಸಾಗಿದ್ದು ದ್ವಿತೀಯ ವಾರ್ಷಿಕ ಪಟ್ಲ ಸಂಭ್ರಮಕ್ಕೆ ಇದಾಗಲೇ ಕ್ಷಣಗಣನೆ ಪ್ರಾರಂಭವಾಗಿದೆ. ಈ ಯಕ್ಷಗಾನ ಕಾರ್ಯಕ್ರಮವು ಅಕ್ಟೋಬರ್ 28ರ ಶುಕ್ರವಾರದಂದು ಮನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ

ಯಕ್ಷಗಾನ ಕಲಾವಿದರ ಕಲ್ಯಾಣಕ್ಕಾಗಿಯೇ ಯಕ್ಷಧ್ರುವ ಪಟ್ಲ ಸತೀಶ್ ರವರ ಸಾರಥ್ಯದಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಸ್ಥಾಪನೆಯಾದ ಆರು ವರುಶಗಳಲ್ಲಿಯೇ ಸುಮಾರು ಎಂಟು ಕೋಟಿಗಳ ಸೇವಾ ಯೋಜನೆಯನ್ನು ಅನುಷ್ಠಾನಗೊಳಿಸಿ ಸಾವಿರಾರು ಅಶಕ್ತ ಕಲಾವಿದರುಗಳ ಬಾಳಿನಲ್ಲಿ ಆಶಾಕಿರಣವನ್ನು ಮೂಡಿಸಿದೆ. ದೇಶ ವಿದೇಶಗಳಲ್ಲಿ ಸುಮಾರು 39 ಘಟಕಗಳನ್ನು ಹೊಂದಿರುವ ಪಟ್ಲ ಪೌಂಡೇಶನ್ ನ ಬಹರೈನ್ ಹಾಗು ಸೌದಿ ಘಟಕದ ದ್ವಿತೀಯ ಪಟ್ಲ ಸಂಭ್ರಮದ ಮುಖ್ಯ ಅತಿಥಿಯಾಗಿ ಯಕ್ಷ ಧ್ರುವ ಪಟ್ಲ ಪೌಂಡೇಶನ್ ನ ಕೇಂದ್ರ ಘಟಕದ ಗೌರವಾಧ್ಯಕ್ಷರಾದ ಖ್ಯಾತ ಉದ್ಯಮಿ ಹಾಗು ಸಮಾಜ ಸೇವಕ ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಇವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಯಕ್ಷಧ್ರುವ ಪಾಟೀಲ ಫೌಂಡೇಶನ್ ನ ದುಬೈ ಘಟಕದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಹಾಗು ದುಬೈ ಘಟಕದ ಗೌರವಾಧ್ಯಕ್ಷರಾದ ಶ್ರೀ ವಕ್ವಾಡಿ ಪ್ರವೀಣ್ ಶೆಟ್ಟಿ ಯವರ ಉಪಸ್ಥಿತಿ ಇರಲಿರುವುದು. ಬಹರೈನ್ ಹಾಗು ಸೌದಿ ಅರೇಬಿಯಾದ ಹವ್ಯಾಸಿ ಕಲಾವಿದರುಗಳ ಜೊತೆಗೆ ನಾಡಿನ ಯಕ್ಷ ದಿಗ್ಗಜರುಗಳು ರಂಗದ ಮೇಲೆ ತಮ್ಮ ಕಲಾಪ್ರೌಢಿಮೆಯನ್ನು ಮೆರೆಯಲಿದ್ದಾರೆ . ಯಕ್ಷ ಧ್ರುವ ಪಟ್ಲ ಸತೀಶ್ ರವರು ತಮ್ಮ ಕಂಠ ಸಿರಿಯಿಂದ ಬಹರೈನ್ ಯಕ್ಷಪ್ರೇಮಿಗಳಿಗೆ ಮೋಡಿ ಮಾಡಲಿದ್ದಾರೆ.

ಖ್ಯಾತ ಕಲಾವಿದ ಶ್ರೀ ದೀಪಕ್ ಪೇಜಾವರ್ ರವರು ಈ ಯಕ್ಷಗಾನ ಕಥಾ ಪ್ರಸಂಗವನ್ನು ನಿರ್ದೇಶಿಸುವುದರೊಂದಿಗೆ ಸ್ವತಃ ಶಶಿ ಪ್ರಭಾಳ ಪಾತ್ರವನ್ನು ನಿರ್ವಹಿಸುತಿದ್ದಾರೆ . ಹಿಮ್ಮೇಳದಲ್ಲಿ ಖ್ಯಾತ ಭಾಗವತ ಯಕ್ಷಧ್ರುವ ಸತೀಶ್ ಪಟ್ಲಾ ರವರೊಂದಿಗೆ ರೋಷನ್ ,ಎಸ್ . ಕೋಟ್ಯಾನ್ ರವರು ,ಚೆಂಡೆ ಮದ್ದಳೆಯಲ್ಲಿ ನಾಡಿನ ಖ್ಯಾತ ಮದ್ದಳೆ ವಾದಕ ಕೌಶಿಕ್ ರಾವ್ ಪುತ್ತಿಗೆ ,ಧನಂಜಯ್ ಕಿನ್ನಿಗೊಳ್ಳಿ ,ಗಣೇಶ್ ಕಟೀಲು ,ಚಕ್ರತಾಳದಲ್ಲಿ ರಾಜೇಶ್ ಮಾವಿನ ಕಟ್ಟೆಯವರು ,ಮುಮ್ಮೇಳದಲ್ಲಿ ಪದ್ಮಶೇಖರನ ಪಾತ್ರದಲ್ಲಿ ನವೀನ್ ಭಂಡಾರಿ ಕೋಳಾರು,ಮಾರ್ತಾಂಡತೇಜನಾಗಿ ಜೀವಿತೇಶ್ ಪೂಂಜ,ಕಮಲಧ್ವಜನಾಗಿ ಅಭಿಷೇಕ್ ಕಲ್ಲಡ್ಕ,ವಿಜಯ ಸೇನನಾಗಿ ಮೋಹನ್ ಎಡನೀರು,ಭದ್ರಕೇತನಾಗಿರಂಜಿತ್ ಶೆಟ್ಟಿ ಕಿರಾತನಾಗಿ ಸಚಿನ್ ಪಾಟಾಳಿ, ಮುದಿಯಪ್ಪಣ್ಣನಾಗಿ ಗಣೇಶ್ ಕಟೀಲು,ಕಿರಾತ ಪಡೆಯಲ್ಲಿ ರಾಜೇಶ್ ಶೆಟ್ಟಿಗಾರ್, ದಿವ್ಯರಾಜ್ ರೈ, ಸುನಿಲ್ ಪಿ.ಎಸ್, ಪ್ರಜ್ಞಾ, ಪೂರ್ವಜಾ, ಧನ್ವಿ ,ತೀರ್ಥಾ, ಝಾನ್ಸಿ,ಮಾಂಡವ್ಯ ಮುನಿಯಾಗಿ ಪೂರ್ಣಿಮಾ ಜಗದೀಶ್ ,ಕಮಲಗಂಧಿನಿಯಾಗಿ ಅಜಿತ್ ಕುಮಾರ್,ವನಪಾಲಕಿ ಮುದುಕಿ- ಭಾಸ್ಕರ ಆಚಾರ್ಯ,ವನಪಾಲಕಿಯರು – ಹೇಮಂತ್ ಸಾಲ್ಯಾನ್,ಸಂತೋಷ್ ಆಚಾರ್ಯ,ಭ್ರಮರಕುಂತಳೆಯಾಗಿ ಶರತ್ ಕುಡ್ಲ(ದುಬೈ),ಘೋರರೂಪಿಯಾಗಿ ರಾಮ್‍ಪ್ರಸಾದ್ ಅಮ್ಮೆನಡ್ಕ ಹಾಗು ಶ್ರೀ ದೇವಿ- ಶೋಭಾ ರಾಮ್ ಪ್ರಸಾದ್ ಇವರುಗಳುರಂಗದಲ್ಲಿ ಮಿಂಚಲಿದ್ದಾರೆ . ಯಕ್ಷಗಾನ ಪ್ರದರ್ಶನಕ್ಕೆ ಮುನ್ನ ಪೂರ್ವರಂಗ ಪ್ರದರ್ಶನವಿದ್ದು ಕುಮಾರಿಯರಾದ ಪ್ರಜ್ಞಾ ಜಗದೀಶ್, ಪೂರ್ವಜಾ ಜಗದೀಶ್, ತೀರ್ಥಾ ಗಣೇಶ್, ಧನ್ವಿ ರಾಮ್ ಪ್ರಸಾದ್ ಈ ಪ್ರದರ್ಶನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮಕ್ಕೆ ದ್ವೀಪದ ಎಲ್ಲಾ ಯಕ್ಷಪ್ರೇಮಿಗಳಿಗೆ ಮುಕ್ತ ಅವಕಾಶವಿದ್ದು ಯಕ್ಷಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮವನ್ನು ಚಂದಕಾಣಿಸಿಕೊಡಬೇಕೆಂದು ಯಕ್ಷಧ್ರುವ ಪಟ್ಲಾ ಪೌಂಡೇಶನ್ ನ ಬಹರೈನ್ ಹಾಗು ಸೌದಿ ಘಟಕದ ಅಧ್ಯಕ್ಷರಾದ ಶ್ರೀ ರಾಜೇಶ್ ಶೆಟ್ಟಿ ಯವರು ಕರೆ ನೀಡಿದ್ದಾರೆ . ಈ ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಶ್ರೀ ರಾಜೇಶ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 38902807 ಮುಖೇನ ಸಂಪರ್ಕಿಸಬಹುದು

Related Posts

Leave a Reply

Your email address will not be published.