ಯುವ ವಕೀಲನ ಉಪಟಳದಿಂದ ತೊಂದರೆ ಅನುಭವಿಸಿದ್ದೇವೆ : ಬಂಟ್ವಾಳದಲ್ಲಿ ಸುದ್ದಿಗೋಷ್ಟಿ ನಡೆಸಿ ಅಳಲು ತೋಡಿಕೊಂಡ ಭವಾನಿ

ಬಂಟ್ವಾಳ: ಯುವ ವಕೀಲ ಕುಲದೀಪ್ ಶೆಟ್ಟಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ದೌಜ್ಯನ್ಯ ನಡೆಸಿದ ಪುಂಜಾಲಕಟ್ಟೆ ಪೆÇಲೀಸರ ಅಮಾನತಿಗೆ ಆಗ್ರಹಿಸಿ ಜಿಲ್ಲಾಯದ್ಯಂತ ವಕೀಲರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೆ ಯುವ ವಕೀಲನ ಉಪಟಳದಿಂದ ತುಂಬಾ ತೊಂದರೆಯಾಗಿದ್ದು ಮಾನಸಿಕವಾಗಿ ಕುಗ್ಗಿ ಹೋಗಿರುವುದಾಗಿ ದೂರುದಾರ ವಸಂತಗೌಡ ಅವರ ಪತ್ನಿ ಭವಾನಿ ಅಳಲು ತೋಡಿಕೊಂಡಿದ್ದಾರೆ.

ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕಳೆದ ಡಿ. 2ರಂದು ತಾನು ತನ್ನ ಪತಿ ಹಾಗೂ ಕೆಲಸದಾಳು ಅವರೊಂದಿಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಂಜೆ 4.15ರ ಸುಮಾರಿಗೆ ನಮ್ಮ ಜಮೀನಿಗೆ ಗೇಟು ಅಳವಡಿಸಿದ ಜಾಗದಿಂದ ಜೋರಾದ ಶಬ್ದ ಕೇಳಿ ಬಂದಿದ್ದು ನೋಡಿದಾU, ಚಂದ್ರಶೇಖರ ಶೆಟ್ಟಿ, ಕುಲದೀಪ್ ಶೆಟ್ಟಿ ಹಾಗೂ ಹಸಿರು ಶಾಲು ಧರಿಸಿದ ಕೆಲವರು ಕಬ್ಬಿಣದ ಗೇಟನ್ನು ಮುರಿದು ಪಿಕ್‍ಅಪ್ ವಾಹನದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ಇದನ್ನು ಸ್ಥಳೀಯ ನಿವಾಸಿ ಜಗದೀಶ್ ಎಂಬರು ಮೊಬೈಲ್‍ನಲ್ಲಿ ಪೆÇಟೋ ತೆಗೆದಿದ್ದು ಬಳಿಕ ಪೆÇಲೀಸರಿಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಬಂದ ಮಹಿಳಾ ಪೆÇಲೀಸ್ ಕುಲದೀಪ್‍ಗೆ ಪೆÇೀನ್ ಮಾಡಿ ವಿಚಾರಿಸಿದಾಗ ಆರೋಪಿ ಅವರಿಗೆ ಅಸಭ್ಯವಾಗಿ ನಿಂದಿಸಿದ್ದಾನೆ. ಬಳಿಕ ಪುಂಜಾಲಕಟ್ಟೆ ಪೆÇಲಿಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದನ್ವಯ ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿ ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮರು ದಿನ ಪೆÇಲೀಸರು ಮಹಜರು ನಡೆಸಲು ಪೆÇಲೀಸರು ಗೇಟು ಕಳವಾದ ಸ್ಥಳಕ್ಕೆ ಬಂದಾಗ ಕುಲದೀಪ್ ಇದೇ ಸ್ಥಳದಿಂದ ಗೇಟ್ ತೆಗೆದಿರುವುದಾಗಿ ಪೆÇಲೀಸರಿಗೆ ತೋರಿಸಿದ್ದಾನೆ, ಅಲ್ಲದೆ ತನ್ನ ಮನೆಯಂಗಳದಲ್ಲಿ ಗೇಟ್ ಇಟ್ಟಿರುವುದಾಗಿ ತಿಳಿಸಿದ ಕಾರಣ ಪೆÇಲೀಸರೊಂದಿಗೆ ಮನೆಗೆ ಹೋಗಿ ನೋಡಿದಾಗ ಗೇಟನ್ನು ತೋರಿಸಿಕೊಟ್ಟಿದ್ದಾನೆ. ಆ ಬಳಿಕ ನಮ್ಮ ಜಾಗದಲ್ಲಿ ಗೇಟ್ ಇರುವುದಿಲ್ಲ ಎಂದು ನ್ಯಾಯಾಲಯದಲ್ಲಿ ಸುಳ್ಳು ಅಫಿಢವಿತ್ ಸಲ್ಲಿಸಿ ತಡೆಯಾಜ್ಞೆ ತಂದಿದ್ದಾನೆ ಎಂದು ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ದೂರುದಾರ ವಸಂತಗೌಡ, ಸ್ಥಳೀಯರಾದ ರತ್ನಾಕರ, ಜಗದೀಶ್, ರಾಜೇಂದ್ರ ಜೈನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.