ಬೆಳ್ಳಾರೆ : ಸಾಮಾಜಿಕ ಜಾಲತಾಣದಲ್ಲಿ ಝಕರಿಯ ಜುಮ್ಮ ಮಸೀದಿ ಬಗ್ಗೆ ಅಪಪ್ರಚಾರ – ಇಬ್ರಾಹಿಂ ಖಲೀಲ್ ವಿರುದ್ಧ ದೂರು

ಬೆಳ್ಳಾರೆ ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಂಘ ಸಂಸ್ಥೆ, ಗುಂಪು, ಪಂಗಡಗಳ, ವಿರುದ್ಧ ತಕರಾರು ಎತ್ತಿ ದ್ವೇಷ ಹರಡಿ ನಿರಂತರ ತೊಡಕುಂಟು ಮಾಡುತ್ತಿರುವ. ಅಲ್ಲದೆ ಬೆಳ್ಳಾರೆ ಝಕರಿಯ ಜುಮ್ಮ ಮಸೀದಿಯಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಸಂದೇಶ ಹಾಕಿರುವುದಾಗಿ ಬೆಳ್ಳಾರೆ ಝಕರಿಯ ಜುಮ್ಮ ಮಸೀದಿಯ ಆಡಳಿತ ಮಂಡಳಿಯವರು ನಿಂತಿಕಲ್ ಸಮೀಪದ ಸಮಹಾದಿಯ ಇಬ್ರಾಹಿಂ ಖಲೀಲ್ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಸೆ.27 ರಂದು ದೂರು ನೀಡಿದ್ದಾರೆ.

ದೂರಿನಲ್ಲಿ ಇಬ್ರಾಹಿಂ ಖಲೀಲ್ ಎಂಬಾತನು ಹಲವಾರು ಸುಳ್ಳು ದ್ವೇಷ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿದ್ದುಪಂಗಡ ಮತ್ತೆ ಜಾತಿಗಳ ನಡುವೆ ವೈಷಮ್ಯ ವೈರಾಗ್ಯ , ಕೋಮು ಪ್ರಚೋದನೆ ಬರುವ ರೀತಿಯಲ್ಲಿ ಬರೆದಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಜಮಾಅತ್ ಅದ್ಯಕ್ಷರಾದ ಯು. ಹೆಚ್. ಅಬೂಬಕ್ಕರ್ ಹಾಜಿ, ಕಾರ್ಯದರ್ಶಿ ಬಸೀರ್ ಕಲ್ಲಪಣೆ, ಸದಸ್ಯರಾದ ಹಮೀದ್ ಹೆಚ್ ಎಂ, ಹನೀಪ್ ನೆಟ್ಟಾರ್, ಜಮಾಅತರಾದ ಆರಿಪ್ ಬಿ ಎಂ, ಬಿ ಎ ಮಹಮೂದ್, ಕಲಂದರ್ ಹಾಜಿ, ಸವದ್ , ಜಮಾಲುದ್ದೀನ್ ಕೆ. ಎಸ್, ಸಿದ್ದೀಕ್ ಮಾಲೆಂಗ್ರಿ, ಜಮಾಲ್ ಮಣಿಮಜಲ್, ಆಶಿಕ್ ಮಂಗಳ, ಶರೀಪ್ ನೆಟ್ಟಾರ್, ರಹೀಂ ನೆಟ್ಟಾರ್,ಇಸ್ಮಾಯಿಲ್ ಹಾಜಿ, ಅಜರುದ್ದೀನ್, ಮಹಮ್ಮದ್, ತೌಸೀಪ್,ಇಬ್ರಾಹಿಂ, ಮಹಮ್ಮದ್, ಇಸ್ಮಾಯಿಲ್ ನೆಟ್ಟಾರ್, ಅಜೀಜ್ ಸಹಿತ ನೂರಾರು ಯುವಕರು ತೆರಳಿ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ.

Add - Clair veda ayur clinic

Related Posts

Leave a Reply

Your email address will not be published.