ಬೆಳ್ತಂಗಡಿ: ಎರಡೇ ತಾಸಿನಲ್ಲಿ ಗಡಾಯಿಕಲ್ಲು ಏರಿ ದಾಖಲೆ ನಿರ್ಮಿಸಿದ ಕೋತಿರಾಜ್

ಬೆಳ್ತಂಗಡಿ: ಜ್ಯೋತಿರಾಜ್ ಯಾನೆ ಕೋತಿ ರಾಜ್ ಎಂದೇ ಖ್ಯಾತಿಯಾಗಿರುವ ಮಂಕಿ ಮ್ಯಾನ್ ಎರಡೇ ತಾಸಿನಲ್ಲಿ ಮೆಟ್ಟಿಲುಗಳ ಸಹಾಯವಿಲ್ಲದೆ ಕೈಗಳ ಸಹಾಯದಿಂದ ಬಂಡೆ ಏರಿ ದಾಖಲೆ ನಿರ್ಮಿಸಿದ್ದಾರೆ. ಕೈ ಮೂಲಕ ಸಮುದ್ರ ಮಟ್ಟದಿಂದ 1700 ಅಡಿಯಿರುವ ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲನ್ನು ಪ್ರಪ್ರಥಮ ಬಾರಿಗೆ ಏರುವ ಮೂಲಕ ದಿ ಮಂಕಿ ಮ್ಯಾನ್ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ರವಿವಾರ ಬೆಳಗ್ಗೆ ಇಲ್ಲಿನ ಚಂದ್ರರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ದೇವಸ್ಥಾನದ ಉತ್ತರ ಭಾಗದಿಂದ ಗಡಾಯಿಕಲ್ಲು ಏರುವ ಮುನ್ನ 9.50 ಕ್ಕೆ ತೆಂಗಿನ ಕಾಯಿ ಒಡೆದು ಹತ್ತಲು ಆರಂಭಿಸಿದ್ದಾರೆ. ಸುಮಾರು 11.50 ರ ಸುಮಾರಿಗೆ ಗಡಾಯಿಕಲ್ಲು ತುತ್ತ ತುದಿ ಏರಿ ಕನ್ನಡ ನಾಡಿನ ಬಾವುಟವನ್ನು ಹಾರಿಸುವ ಮೂಲಕ ಕನ್ನಡಭಿಮಾನ ಮೆರೆದಿದ್ದಾರೆ. ಇವರ ತಂಡದಿಂದೊಗೆ ಕುದುರೆಮುಖ ವನ್ಯಜೀವಿ ವಿಭಾಗದ ಆರ್.ಎಫ್.ಒ. ಸ್ವಾತಿ, ಅರಣ್ಯ ರಕ್ಷಕ ಕಿರಣ್ ಪಾಟೀಲ ಜತೆಗಿದ್ದರು.ಈ ಸಾಹಸ ವನ್ನು ವೀಕ್ಷಿಸಲು ದೂರ ದೂರ ದ ಊರು ಗಳಿಂದ ಜನಸ್ತೋಮ ನೆರೆದಿತ್ತು

Related Posts

Leave a Reply

Your email address will not be published.