ಆಟೋ ಮತ್ತು ಸ್ಕೂಟರ್ ಢಿಕ್ಕಿ-ಪ್ರಗತಿಪರ ಕೃಷಿಕ ದಾರುಣ ಅಂತ್ಯ – belthangady

ಬೆಳ್ತಂಗಡಿ: ಆಟೋ ಮತ್ತು ಸ್ಕೂಟರ್ ಪರಸ್ಪರ ಢಿಕ್ಕಿ ಹೊಡೆದು ಪ್ರಗತಿಪರ ಕೃಷಿಕರೋರ್ವರು ಮೃತಪಟ್ಟ ಘಟನೆ ಬೆಳ್ತಂಗಡಿಯ ಕಾಶಿಪಟ್ಟ ಗ್ರಾಮದಲ್ಲಿ ನಡೆದಿದೆ.ಕೊಕ್ರಾಡಿ- ಶಿರ್ತಾಡಿ ರಸ್ತೆಯ ಪೆರಂದಡ್ಕ ಎಂಬಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಹಂಬಡ ನಿವಾಸಿ,ನಿತ್ಯಾನಂದ ಪೂಜಾರಿ (48) ಮೃತಪಟ್ಟ ದುರ್ದೈವಿ. ನಿತ್ಯಾನಂದ ಪೂಜಾರಿ ಅವರು ಶಿರ್ತಾಡಿ ಕಡೆಯಿಂದ ಪೆರಾಡಿಯತ್ತ ಸ್ಕೂಟರ್‌ನಲ್ಲಿ ಸಾಗುತ್ತಿದ್ದರು. ವಿರುದ್ಧ ದಿಕ್ಕಿನಿಂದ ಬಂದ ಆಟೋ ಮಧ್ಯೆ ಮುಖಾಮುಖಿ ಅಪಘಾತ ಸಂಭವಿಸಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
