ಕೊನೆಗೂ ಉದ್ಘಾಟನೆಗೊಂಡ ಗುಣನಾಥ್ ಅವರ ಭಾರ್ಗವಿ ಬಿಲ್ಡರ್ಸ್‍ನ ಕೈಲಾಶ ಅಪಾರ್ಟ್‍ಮೆಂಟ್…!

ಗುಣನಾಥ್ ಪ್ರಮ್ ದುಬೈ ಅವರ ಕನಸು ಕೊನೆಗೂ ನನಸಾಗಿದೆ. ಭಾರ್ಗವಿ ಬಿಲ್ಡರ್ಸ್‍ನವರ ಕೈಲಾಶ್ ಅಪಾರ್ಟ್‍ಮೆಂಟ್‍ನ್ನು ಆಯ್ಕೆ ಮಾಡಿಕೊಂಡ ಗುಣನಾಥ್ ಅವರು, ತಮ್ಮ ಕನಸಿನ ಲಕ್ಷುರಿ ಅಪಾರ್ಟ್‍ಮೆಂಟ್ ಸುಂದರವಾಗಿ ನಿರ್ಮಾಣಗೊಂಡಿದ್ದು, ಇಂದು ಪ್ರತಿಷ್ಠಿತ ಗಣ್ಯರ ಸಮ್ಮುಖದಲ್ಲಿ ಮೊಕ್ ಅಪ್ ಪ್ಲಾಟ್ ಉದ್ಘಾಟನೆಗೊಂಡಿತು. ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಗುಣನಾಥ್ ಅವರು ತನ್ನ ಪ್ರೀತಿಯ ಶಿಲ್ಪನಿಗಾಗಿ ಹೈ ಲಿವಿಂಗ್ ಐಷಾರಾಮಿ ಅಪಾರ್ಟ್‍ಮೆಂಟ್‍ನ್ನು ತಿಂಗಳುಗಟ್ಟಲೆ ಹುಡುಕಿ ಹುಡುಕಿ ಕೊನೆಗೂ ಮಂಗಳೂರಿನ ಕೊಟ್ಟಾರದಲ್ಲಿರುವ ಭಾರ್ಗವಿ ಬಿಲ್ಡರ್ಸ್‍ನವರ ಕೈಲಾಶ್ ಅಪಾರ್ಟ್ ಮೆಂಟನ್ನು ಆಯ್ಕೆ ಮಾಡಿಕೊಂಡರು. ಇದೀಗ ಗುಣನಾಥ್ ಅವರ ಲೈಪ್ ಜಿಂಗಲಾಲ ಆಗಿದೆ. ಮದುವೆಯೂ ಆಯಿತು, ಆತ್ಯಾಧುನಿಕ ಮೂಲ ಸೌಕರ್ಯ ಹೊಂದಿರುವ ಲಕ್ಷುರಿ ಅಪಾರ್ಟ್‍ಮೆಂಟ್ ಸಿದ್ಧಗೊಂಡು ಪ್ರತಿಷ್ಠಿತ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.

ನಗರದ ಕೊಟ್ಟಾರದಲ್ಲಿ ಉತ್ತಮ ಗುಣಮಟ್ಟದ ಜೊತೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಗುಣನಾಥ್ ಅವರ ಮೊಕ್ ಅಪ್ ಪ್ಲಾಟ್ ಭಾರ್ಗವಿ ಬಿಲ್ಡರ್ಸ್‍ನವರ ಕೈಲಾಶ್ ಅಪಾರ್ಟ್‍ಮೆಂಟ್ ಉದ್ಘಾಟನೆಗೊಂಡಿತು. ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಂಬೈಯ ಸಾಯಿ ಪ್ಯಾಲೇಸ್ ಗ್ರೂಫ್ ಆಫ್ ಹೋಟೆಲ್ಸ್‍ನ ಚೇರ್‍ಮೆನ್ & ಮ್ಯಾನೇಜಿಂಗ್ ಡೈರೆಕ್ಟರ್ ರವಿ ಶೆಟ್ಟಿ ಅವರು ಮಾತನಾಡಿ, ದಿನದಿಂದ ದಿನಕ್ಕೆ ಅಬಿವೃದ್ದಿ ಕಾಣುತ್ತಿರುವ ಮಂಗಳೂರಿಗೆ ಇಂತಹ ಲಕ್ಷುರಿ ಅಪಾರ್ಟ್‍ಮೆಂಟ್‍ಗಳ ಅಗತ್ಯವಿದ್ದು, ಅದು ಭಾರ್ಗವಿ ಬಿಲ್ಡರ್ಸ್ ಅವರಿಂದ ಸಾಧ್ಯವಾಗಿದೆ ಎಂದರು.

ಆನಂತರ ಕ್ರೆಡೈ ಮಂಗಳೂರಿನ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ಅವರು ಕೈಲಾಶ್ ಅಪಾರ್ಟ್‍ಮೆಂಟ್‍ನ ಗುಣಮಟ್ಟ ಅದ್ಭುತವಾಗಿದೆ. ಕೆಲಸಗಳು ಮುಗಿಯುವ ಹೊತ್ತಿಗೆ ನೂರಕ್ಕೆ ನೂರು ಮನೆಗಳು ಮಾರಾವಾಗಲಿ ಎಂದು ಹಾರೈಸಿದರು. ಇದೇ ವೇಳೆ ಬ್ರಾಂಡ್ ಅಂಬಾಸಿಡರ್ ಆಗಿರುವ ಗುಣನಾಥ್ ಅವರು ಹಾಸ್ಯದ ಹೊನಲನ್ನು ಹಾರಿಸಿ ನೆರೆದವರನ್ನು ಮನರಂಜಿಸಿದರು. ಕಾರ್ಯಕ್ರಮದಲ್ಲಿ ಪ್ರಾಜೆಕ್ಟ್ ಹೆಡ್ ಗುರುದತ್ ಶೆಣೈ ಅವರು ಮೋಕ್ ಅಪ್ ಪ್ಲಾಟ್‍ನ ವೈಶಿಷ್ಟ್ಯತೆಯ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಭಾರ್ಗವಿ ಬಿಲ್ಡರ್ಸ್‍ನ ಪ್ರೊಪೈಟರ್ ಭಾಸ್ಕರ್ ಗಡಿಯಾರ್, ಪ್ರೋಜೆಕ್ಟ್ ಹೆಡ್ ಮಂಗಳಾ ದೀಪ್ ಮತ್ತು ಮಹೇಶ್ ಶೆಟ್ಟಿ, ನಟಿ ಚೈತ್ರಾ ಶೆಟ್ಟಿ ಉಪಸ್ಥಿತರಿದ್ದರು. ಸೌಜನ್ಯ ಹೆಗ್ಡೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಭಾರ್ಗವಿ ಬಿಲ್ಡರ್ಸ್‍ನ ಕೈಲಾಶ್ ವಸತಿ ಸಮುಚ್ಚಯ ಉತ್ತಮ ಗುಣಮಟ್ಟದ ಜೊತೆಗೆ ಆತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಮಂಗಳೂರು ನಗರದಲ್ಲಿ ಪ್ರಥಮ ಬಾರಿಗೆ ವಸತಿ ಸಮುಚ್ಚಯದ ಮೇಲ್ಚಾವಣಿಯಲ್ಲಿ ಸುಸಜ್ಜಿತ ಈಜುಕೊಳ ನಿರ್ಮಾಗೊಂಡಿದೆ. ಭಾರ್ಗವಿ ಬಿಲ್ಡರ್ಸ್‍ಬಲ್ಲಿ 15 ಮಹಡಿಗಳಲ್ಲಿ 131 ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಲಾಗಿದೆ. ಕೈಲಾಶ್ ಅಪಾರ್ಟ್‍ಮೆಂಟ್‍ನಲ್ಲಿ ಆಲ್ಟ್ರಾ ಆಧುನಿಕ ಸೌಲಭ್ಯಗಳು ರೂಫ್‍ಟಾಪ್ ಇನ್ಪಿನಿಟಿ ಈಜುಕೊಳ, ಮಿನಿ ಥಿಯೇಟರ್, ಹಾವಾನಿಯಂತ್ರಿತ ಜಿಮ್ನಾಶಿಯಂ, ಒಳಾಂಗಣ ಮತ್ತು ಹೊರಾಂಗಣ ಆಟಗಳಿಗೆ ಸ್ಥಳಾವಕಾಶ, ಮಕ್ಕಳ ಆಟದ ಮೈದಾನ, ಗ್ರಂಥಾಲಯ, ಯೋಗ ಪೆವಿಲಿಯನ್, ವಿಸಿಟರ್ ಲೊಬಿ, ಸೋಲಾರ್ ಪ್ಯಾನಲ್ಸ್, ರೆಟಿಕ್ಯುಲೇಟೆಡ್ ಗ್ಯಾಸ್ ಕಲೆಕ್ಷನ್, ಕಾರ್ ಪಾರ್ಕಿಂಗ್, ಜನರೇಟರ್ ಸೌಲಭ್ಯಗಳು ಲಭ್ಯವಿದೆ. ಕೈಲಾಶ್ ವಸತಿ ಯೋಜನೆಯಲ್ಲಿ ಅಪಾರ್ಟ್‍ಮೆಂಟ್ ಬುಕ್ಕಿಂಗ್‍ಗಾಗಿ ಕೊಟ್ಟಾರದಲ್ಲಿರುವ ಭಾರ್ಗವಿ ಬಿಲ್ಡರ್ಸ್ ಕಚೇರಿಯನ್ನು ಅಥವಾ ವೆಬ್‍ಸೈಟನ್ನು ತಿತಿತಿ.bhಚಿಡಿgಚಿvi buiಟಜeಡಿs.ಛಿom oಡಿ ಛಿಚಿಟಟ: 96117 30555/ 70909 33900 ಸಂಪರ್ಕಿಸಬಹುದು.

Related Posts

Leave a Reply

Your email address will not be published.