Home ಕರಾವಳಿ Archive by category ಬೆಳ್ತಂಗಡಿ

ಕನ್ಯಾಡಿ ರಾಮ ಮಂದಿರಕ್ಕೆ ಸಚಿವ ಸುನಿಲ್ ಕುಮಾರ್ ಭೇಟಿ: ಅನ್ನ ಛತ್ರದ ಕಾಮಗಾರಿ ವೀಕ್ಷಣೆ

ಬೆಳ್ತಂಗಡಿಯ ಕನ್ಯಾಡಿ ರಾಮ ಮಂದಿರಕ್ಕೆ ಇಂಧನ ಸಚಿವ ಸುನಿಲ್ ಕುಮಾರ್ ರವರು ಬೇಟಿ ನೀಡಿ ಸ್ವಾಮಿಗಳ ಆಶೀರ್ವಾದ ಪಡೆದರು ನಂತರ ಅಲ್ಲಿ ನಡೆಯುತ್ತಿರುವ ಅನ್ನ ಛತ್ರದ ಕಾಮಗಾರಿ ವೀಕ್ಷಣೆ ಮಾಡಿದರು,ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ,ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಹಾಗೂ ಇತರರು ಉಪಸ್ಥಿತರಿದ್ದರು.

ನೆನಪಿನಂಗಳದಲ್ಲಿ ಕೃತಿ ಲೋಕಾರ್ಪಣೆ.

ಬೆಳ್ತಂಗಡಿ: ಆಧುನಿಕ ಶಿಕ್ಷಣ ಕ್ಷೇತ್ರ ಸಂಕ್ರಮಣ ಸ್ಥಿತಿಯಲ್ಲಿದ್ದು, ಸಮಗ್ರ ಬದಲಾವಣೆಯ ಹೆಜ್ಜೆಗಳ ಅನುಷ್ಠಾನಕ್ಕೆ ಇದು ಸಕಾಲ ಎಂದು ಮೂಡುಬಿದಿರೆಯ ಮೂಡುಮಾರ್ನಾಡು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಡಾ.ರಾಜಶ್ರೀ ಬಿ ಹೇಳಿದರು. ಬೆಳ್ತಂಗಡಿ ತಾಲೂಕಿನ ವೇಣೂರಿನ ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿಉಜಿರೆಎಸ್ ಡಿ ಎಂ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಡಾ.ಸುಬ್ರಹ್ಮಣ್ಯ ಭಟ್ ಬರೆದ ’ ನೆನಪಿನಂಗಳದಲ್ಲಿ’ ಕೃತಿ ಬಿಡುಗಡೆ

ಕೊರಗಜ್ಜನ ದೈವವನ್ನು ಹೋಲುವ ವೇಷಭೂಷಣ ಧರಿಸಿ ವಂಚನೆ

ದುರ್ಬಲ ಮನೋಸ್ಥಿತಿಯ ಬಡ ಮುಗ್ಧ ದಲಿತ ವ್ಯಕ್ತಿಗೆ ಕೊರಗಜ್ಜನ ವೇಷ ಹಾಕಿಸಿ ಕುಣಿಸಿ  ಕೊರಗಜ್ಜ ಮೈಮೇಲೆ ಬಂದು ಕಷ್ಟ ನಿವಾರಿಸುವ ಅಭಯ ಹಸ್ತ ನೀಡುತ್ತಾನೆಂಬುದಾಗಿ ನಂಬಿಸಿ  ವಂಚಿಸುತ್ತಾ ಹರಕೆ, ಪರಿಹಾರ, ಪ್ರಶ್ನೆ ಇತ್ಯಾದಿ ಹೆಸರಿನಲ್ಲಿ  ಎರಡು ವರ್ಷಗಳಿಂದ ನೊಂದು ಬರುವವರಿಂದ ಹಣ ದೋಚುತ್ತಿರುವ ಮೌಢ್ಯ ಪ್ರಚೋದಿಸುವ  ದಂಧೆಯೊಂದು ಬೆಳ್ತಂಗಡಿ ತಾಲೂಕಿನ ಕುಗ್ರಾಮದಂತಿರುವ ಶಿಶಿಲ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ದ ಕ ಜಿಲ್ಲೆಯ ಬೆಳ್ತಂಗಡಿ

ಪ್ರಾಣಿಗಳಲ್ಲಿ ದೇವರನ್ನುಕಾಣಬೇಕು :ಚಂದನ್ ಶರ್ಮ

ಉಜಿರೆ: ಶ್ವಾನವನ್ನೊಳಗೊಂಡಂತೆ ಎಲ್ಲ ಪ್ರಾಣಿಗಳ ಕಣ್ಣಲ್ಲಿದೇವರನ್ನುಕಾಣಬೇಕುಎಂದು ಪವರ್ ಟಿವಿ ವಾಹಿನಿಯ ಮಾಜಿ ಸಂಪಾದಕಚಂದನ್ ಶರ್ಮ ಹೇಳಿದರು. ಉಜಿರೆಎಸ್.ಡಿ.ಎಂಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ  ನಡೆದ, ಉಪನ್ಯಾಸಕಿ ಶ್ರುತಿಜೈನ್‍ಅವರ ಚೊಚ್ಚಲ ಕೃತಿ ‘ಪ್ರೀತಿಗೊಂದು ಹೆಸರುಇದುಝಿಪ್ಪಿಗ್ರಫಿ’  ಪುಸ್ತಕ ಲೋಕಾರ್ಪಣಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ವಾನಗಳು ಬದುಕಿನ ಪಾಠವನ್ನು ಕಲಿಸುತ್ತದೆ.ಸ್ವಾರ್ಥ ಅಸೂಯೆಗಳಿಲ್ಲದೆ

ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಹೊಟೇಲ್ ಉದ್ಯಮಿ ಸಾವು

ಬೆಳ್ತಂಗಡಿ: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಕೂಟರ್ ಸವಾರನ ಕುತ್ತಿಗೆಗೆ ಸಿಲುಕಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಡಿರುದ್ಯಾವರ ಗ್ರಾಮದ ಹೇಡ್ಯ ಎಂಬಲ್ಲಿ ನಡೆದಿದೆ. ಉಜಿರೆಯಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತಿದ್ದ ಕೊಯ್ಯೂರು ಮಲೆಬೆಟ್ಟು ನಿವಾಸಿ  ರಘು ಎಂಬವರು ತನ್ನ ಹೊಟೇಲ್‍ನಲ್ಲಿ ಕೆಲಸ ಮಾಡುತಿದ್ದ ನೌಕರನನ್ನು ರಾತ್ರಿ ಅವರ ಮನೆಗೆ ಬಿಟ್ಟು  ಹಿಂದಿರುಗುವ ವೇಳೆ ಹೇಡ್ಯ ಜಂಕ್ಷನ್ ಬಳಿ ಆಗಷ್ಟೆ ಪಿಕಪ್

ಸಿನಿಮಾ ವರದಿಗಾರನಾಗಲು ಸಮಯಪ್ರಜ್ಞೆ ಮುಖ್ಯ: ಕಿರಣ್ ಚಂದ್ರ

    “ಚಿತ್ತಾವಧಾನ, ಸಮಯಪ್ರಜ್ಞೆ, ಏಕಾಗ್ರತೆ ವರದಿಗಾರನಿಗೆ ಬಹಳ ಅಗತ್ಯವಾದ ಅಂಶಗಳಾಗಿದ್ದು  ಭಿನ್ನ ಯೋಚನಾ ಕ್ರಮದಿಂದಲೇ ಉತ್ತಮ ವರದಿಗಾರನಾಗಬಹುದು” ಎಂದು  ಝೀ ಕನ್ನಡ ವಾಹಿನಿಯ ಸಿನಿಮಾ ಬರಹಗಾರ ,ಮೂವಿ ಕಂಟೆಂಟ್ ರೈಟರ್  ಕಿರಣ್ ಚಂದ್ರ ಹೇಳಿದರು.     ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಗೂಗಲ್ ಮೀಟ್ ನ ಮೂಲಕ ಏರ್ಪಡಿಸಿದ್ದ ‘ಸಿನೆಮಾ ವರದಿ’ ಕುರಿತ  ಉಪನ್ಯಾಸ  ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.     

ಎಸ್.ಡಿ.ಎಂ ಕಾಲೇಜಿಗೆ ನೂತನ ಪ್ರಾಂಶುಪಾಲರ ನೇಮಕ

ಉಜಿರೆ: ಉಜಿರೆ ಎಸ್.ಡಿ.ಎಂ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಉದಯ ಚಂದ್ರ ನೇಮಕಗೊಂಡದ್ದಾರೆ. ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಸತೀಶ್ಚಂದ್ರ ವಯೋಸಹಜ ನಿವೃತ್ತಿ ಹೊಂದಿದ್ದರಿಂದ ಈ ನೇಮಕಾತಿ ನಡೆಯಿತು. ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲರು ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಪ್ರೊ. ಪ್ರಭಾಕರ್ ರವರು ನಿವೃತ್ತಿ ಹೊಂದಿದ ಪ್ರಾಂಶುಪಾಲರಿಗೆ ಶುಭಕೋರಿ, ನೂತನವಾಗಿ ನೇಮಕವಾದ ಪ್ರಾಂಶುಪಾಲರಿಗೆ ಅಧಿಕಾರ

ಕ್ರಿಯಾಶೀಲ ಕಾರ್ಯಗಳಿಗೆ ಎಸ್.ಡಿ.ಎಮ್. ಸಂಸ್ಥೆ ಚೈತನ್ಯ

ಉಜಿರೆ ಡಿ 31: “ಎಸ್.ಡಿ.ಎಮ್ ಸಂಸ್ಥೆಯ ವಾತಾವರಣ, ಸಹುದ್ಯೋಗಿಗಳ ಬೆಂಬಲ,ಹಿರಿಯರ ಮಾರ್ಗದರ್ಶನವೇ ಎಲ್ಲಾ ಕಾರ್ಯಗಳ ಹಿಂದಿನ ಚೈತನ್ಯ” ಎಂದು ಉಜಿರೆ ಎಸ್.ಡಿ.ಎಮ್. ಪದವಿ ಕಾಲೇಜಿನ ಪ್ರಾಂಶುಪಾಲ ಸತೀಶ್ ಚಂದ್ರ. ಎಸ್ ಬೀಳ್ಕೊಡುಗೆಯ ಸಂದರ್ಭದಲ್ಲಿ ಹೇಳಿದರು.     36 ವರ್ಷಗಳ ಸಮರ್ಥ ಸೇವೆಯ ನಂತರ ಡಾ.ಸತೀಶ್ ಚಂದ್ರ ಅವರಿಗೆ ಎಸ್.ಡಿ.ಎಮ್. ಕಾಲೇಜಿನ ಪ್ರಾಧ್ಯಾಪಕ ಸಂಘ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನಸಿನ ಮನೆ ಪ್ರಾರಂಭೋತ್ಸವ ಕಾರ್ಯಕ್ರಮ

ಬೆಳ್ತಂಗಡಿ ತಾಲೂಕಿನ ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಿರುವ ಕನಸಿನ ಮನೆ ಪ್ರಾರಂಭೋತ್ಸವವು ನಡೆಯಿತು. ನೂತನ ತಂತ್ರಜ್ಞಾನ ಆಕರ್ಷಕ ವಿನ್ಯಾಸಗಳನ್ನು ಹೊಂದಿರುವ ಸಿಮೆಂಟ್- ಫೈಬರ್, ಸ್ಟೀಲ್ ದಾರಂದ ಕಿಟಕಿ ಫೇಮ್ ಬಾಗಿಲು ಹಾಗೂ ಇನ್ನಿತರ ಪರಿಕರಗಳನ್ನು ಹೊಂದಿರುವ ಲಕ್ಷ್ಮಿ ಇಂಡಸ್ಟ್ರೀಸ್ ಹೊಸ ಕನಸಿನ ಮನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ರವರು ಉದ್ಘಾಟಿಸಿದರು.ನಂತರ ಮಾತನಾಡಿ ಈ ಸಂಸ್ಥೆಯ ಮಾಲಕರಾದ ಮೋಹನ್ ರವರು ಉತ್ತಮ

ಡಾ.ಸತೀಶ್ಚಂದ್ರ ಎಸ್ ಅವರಿಗೆ ಪ್ರೊಫೆಸರ್ ಆಫ್ ಎಕ್ಸೆಲೆನ್ಸ್ ಪ್ರಶಸ್ತಿ

  ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ್ಚಂದ್ರ ಎಸ್ ಅವರಿಗೆ ಎಸ್ ಡಿ ಎಂ ಸಿ ಗ್ಲೋಬಲ್ ಅಲ್ಯೂಮ್ನಿ  ಅಸೋಸಿಯೇಷನ್’ ಪ್ರೊಫೆಸರ್ ಆಫ್ ಎಕ್ಸೆಲೆನ್ಸ್’ ಪ್ರಶಸ್ತಿ ನೀಡಿ ಗೌರವಿಸಿತು. ’ ಎಸ್ ಡಿ ಎಂ ಕಾಲೇಜಿನ  ಗ್ಲೋಬಲ್ ಅಲ್ಯೂಮ್ನಿ ಅಸೋಸಿಯೇಷನ್ ಶುಕ್ರವಾರ ಆಯೋಜಿಸಿದ್ದ ’ಹವಾಮಾನ ಬದಲಾವಣೆ’  ಕುರಿತ ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಯಿತು.ಪ್ರತಿವರ್ಷ ಕಾಲೇಜಿನ  ಪ್ರಾಧ್ಯಾಪಕರ ಗಮನಾರ್ಹ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
How Can We Help You?